

* ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಎಸ್.ಪಿ. ಸ್ನೇಹಾ
ಬಿಡದಿ
ಪಟ್ಟಣದಲ್ಲಿನ ಕಸದ ಸಮಸ್ಯೆ ಬಗ್ಗೆ ಉಪ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್.ಪಿ. ಸ್ನೇಹಾ ಗೌತಮ್, ಸಾರ್ವಜನಿಕರು ಕಸ ಎಸೆಯುವ ಬ್ಲಾ$್ಯಕ್ ಸ್ಪಾಟ್ಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಪೊಲೀಸ್ ಕ್ವಾಟ್ರಸ್ಟ್ ರಸ್ತೆ, ಕೆಂಚನಕುಪ್ಪೆ ವಾರ್ಡ್, ಯೋಗೇಶ್ವರ್ ಲೇಔಟ್, ರೈಲು ನಿಲ್ದಾಣ ರಸ್ತೆ ಹಾಗೂ ರೈಲು ನಿಲ್ದಾಣ ಪಕ್ಕದಲ್ಲಿರುವ ತ್ಯಾಜ್ಯನ್ನು ಪರಿಶೀಲನೆ ನಡೆಸಿ, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪ್ರತಿನಿತ್ಯ ನೂರಾರು ಜನರು ಓಡಾಟ ನಡೆಸುವ ಜಾಗಗಳಲ್ಲೆ ಹೆಚ್ಚಾಗಿ ಕಸದ ಸಮಸ್ಯೆ ಕಂಡು ಬರುತ್ತಿದೆ. ಇದಕ್ಕೆಲ್ಲ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪರಿಸರ ಅಭಿಯಂತರನ್ನು ತರಾಟೆಗೆ ತಗೆದುಕೊಂಡರು.
ಪಟ್ಟಣದ ಹಲವು ಕಡೆ ಕಸದ ಸಮಸ್ಯೆ ಹಾಗೂ ಬೆಂಗಳೂರು&ಮೈಸೂರು ಹೆದ್ದಾರಿ ಪಕ್ಕದ ಐಡಿಬಿಐ ಬ್ಯಾಂಕ್ ಪಕ್ಕದಲ್ಲಿ ಕಸದ ರಾಶಿ ಬಿದ್ದಿದ್ದ ಬಗ್ಗೆ ವರ್ಷದ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಉಪ ಲೋಕಾಯುಕ್ತ ಫಣೀಂದ್ರ ಅವರು ಈ ಸಮಸ್ಯೆ ಬಗ್ಗೆ ಸುಮೋಟೋ ಕೇಸ್ ದಾಖಲಿಸಿಕೊಂಡು ವರದಿ ನೀಡುವಂತೆ ಜಿಲ್ಲಾ ಲೋಕಾಯುಕ್ತ ಎಸ್.ಪಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತೆ ಎಸ್.ಪಿ ಸ್ನೇಹಾ ಅಧಿಕಾರಿಗಳ ಜತೆಗೆ ಪಟ್ಟಣದ ಹಲವು ವಾರ್ಡ್ಗಳಲ್ಲಿ ಸಂಚಾರ ಮಾಡಿ ಪರಿಶೀಲನೆ ನಡೆಸಿದರು.
ರೈಲು ನಿಲ್ದಾಣ ಬಳಿ ಬೆಂಗಳೂರು&ಮೈಸೂರು ಹೆದ್ದಾರಿಯ ಪಕ್ಕದಲ್ಲೆ ಕಟ್ಟಡಗಳ ನಿರುಪಯುಕ್ತ ವಸ್ತುಗಳ ರಾಶಿ ಬಿದ್ದಿತ್ತು. ಇದರ ಜತೆಗೆ ಗಿಡ ಗಂಟಿಗಳು ಬೆಳೆದಿದ್ದವು. ಇದನ್ನು ಕಂಡ ಎಸ್ಪಿ ಪಟ್ಟಣದ ಹೃದಯ ಭಾಗದಲ್ಲೆ ಈ ರೀತಿ ಇಟ್ಟುಕೊಂಡರೆ ಹೇಗೆ, ಮೊದಲು ಇದನ್ನೆಲ್ಲ ಖಾಲಿ ಮಾಡಿಸಿ ಸ್ವಚ್ಛತೆ ಕಾಪಾಡಿ ಎಂದು ಸೂಚಿಸಿದರು.
ಪ್ರತಿನಿತ್ಯ ನೂರಾರು ಜನರು ರೈಲ್ವೆ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ಅಲ್ಲದೇ, ಬೆಂಗಳೂರು & ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಹಾಗಾಗಿ ಕೂಡಲೇ ತೆರವು ಮಾಡುವಂತೆ ಖಡಕ್ ಸೂಚನೆ ನೀಡಿದರು.
ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ರಾತ್ರಿ ವೇಳೆ ಪುರಸಭಾ ಅಧಿಕಾರಿಗಳು ಗಸ್ತು ಮಾಡಿ ಕಸವನ್ನು ತಂದು ಹಾಕುವವರನ್ನು ಪತ್ತೆ ಮಾಡಿ ಸ್ಥಳದಲ್ಲೆ ದಂಡ ಹಾಕುವ ಕೆಲಸವನ್ನು ಮಾಡಿ ಎಂದು ಸೂಚನೆ ನೀಡಿದರು.
ಲೋಕಾಯುಕ್ತೆ ಎಸ್.ಪಿ
> ಸ್ನೇಹಾ ಗೌತಮ್
ಪಟ್ಟಣದಲ್ಲಿ ಕಸದ ಸಮಸ್ಯೆ ಬಗ್ಗೆ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತರಿಂದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪತ್ರ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣದ ಹಲವು ಕಡೆ ಕಸ ಹಾಕುವ ಬ್ಲ್ಯಾಕ್ ಸ್ಪಾಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ವರದಿ ಸಿದ್ಧಪಡಿಸಿ ಕಳುಹಿಸಲಾಗುತ್ತದೆ.
ಪಟ್ಟಣದ ಹಲವು ಕಡೆ ಪುರಸಭೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕದಂತೆ ಸಾಕಷ್ಟು ಜಾಗೃತಿ ಮಾಡಿಸಲಾಗುತ್ತಿದೆ. ಬೀದಿ ನಾಟಕಗಳು, ಸಿಸಿ ಕ್ಯಾಮರಾಗಳ ಅಳವಡಿಕೆ ಹಾಗೂ ದಂಡವನ್ನು ಹಾಕುವ ಕೆಲಸ ಮಾಡಲಾಗುತ್ತಿದೆ. ಪ್ರತಿದಿನ ಪುರಸಭೆಯ ಕಸ ಸಂಗ್ರಹಣೆ ಮಾಡುವ ಆಟೋಗಳು ಪ್ರತಿ ವಾರ್ಡ್ನ ಪ್ರತಿ ಮನೆಗಳ ಬಳಿ ಸಂಚಾರ ಮಾಡುತ್ತವೆ. ಇಷ್ಟಾದರೂ ಕಸವನ್ನು ತಂದು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತದೆ. ಹರಿಪ್ರಸಾದ್, ಪುರಸಭಾ ಅಧ್ಯಕ್ಷ