

ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಅಲ್ಯೂಮಿನಿ ಹಾಲ್‌ನಲ್ಲಿ ಇತ್ತೀಚೆಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇಲಾಖೆಯ ವತಿಯಿಂದ ಜಾಗೃತಿ ಅರಿವು ಸಪ್ತಾಹ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಾಸನ ಲೋಕಾಯುಕ್ತ ಪೊಲೀಸ್ ಠಾಣೆ ಡಿವೈಎಸ್ಪಿ ಇನ್‌ಸ್ಪೆಕ್ಟರ್ ಸುರೇಶ್ ಮಾತನಾಡಿ, ಭ್ರಷ್ಟಾಚಾರ ತಡೆಯಲು ತೆಗೆದುಕೊಳ್ಳ ಬೇಕಾದ ಕ್ರಮದ ಬಗ್ಗೆ ವಿವರಿಸಿದರು. ಲೋಕಾಯುಕ್ತ ಪೊಲೀಸರು ದೇಶಾಭಿಮಾನ, ಭಾಷಾಭಿಮಾನ ಹೊಂದಿರಬೇಕು. ಲಂಚ ನಿರ್ಮೂಲನೆ ಮಾಡುವುದೇ ಲೋಕಾಯುಕ್ತದ ಗುರಿಯಾಗಿದೆ. ದುರಾಸೆಗಳಿಗೆ ಒಳಗಾಗಬೇಡಿ ಎಂದು ಹೇಳಿದರು.
ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಮುಖ್ಯಸ್ಥ ಡಾ.ಎಚ್.ಎನ್.ನರಸಿಂಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಇಂದೀರಾ ಬಹೂದ್ದೂರು, ಕಾಲೇಜು ಎನ್.ಎಸ್.ಎಸ್ ಅಧಿಕಾರಿ ಡಾ.ವಿಜಯ್ ಕುಮಾರ್ ತೀಲೆ, ರಿಜಿಸ್ಟ್ರಾರ್ ಕುಮುದಾ ಇತರರು ಇದ್ದರು.