

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮುಂದಿನ ದಿನಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು ಐವರು ಮುಸ್ಲಿಂರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಕರ್ನಾಟಕ ಮುಸ್ಲಿಂ ಪೊಲಿಟಿಕಲï ಪೋರಂ ಮುಖಂಡ ಸಿರಾಜ್ ಜಾಫ್ರಿ ಆಗ್ರಹಿಸಿದರು.
ಕಳೆದ ಸಲ ರಾಜ್ಯದಲ್ಲಿ ಒಬ್ಬರು ಮುಸ್ಲಿಂರು ಲೋಕಸಭೆ ಸದಸ್ಯರಾಗಿಲ್ಲ. ಹೀಗಾಗಿ ಈ ಸಲ ಮುಸ್ಲಿಂರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕು ಎಂದು ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕೈ ಹೈಕಮಾಂಡ್‌ಗೆ ಒತ್ತಾಯಿಸಿದರು. ಅಲ್ಲದೆ ಈ ಕುರಿತು ಪತ್ರ ಬರೆದು ಕೋರಿz್ದೆÃವೆ ಎಂದರು.
ಹಿAದೆ ರಾಜ್ಯದಲ್ಲಿ ಮೂವರು ಮುಸ್ಲಿಂ ಲೋಕಸಭಾ ಸದಸ್ಯರು, ಒಬ್ಬರು ರಾಜ್ಯಸಭಾ ಸದಸ್ಯರಿದ್ದರು, ನಾಲ್ವರು ವಿಧಾನ ಪರಿಷತ್ ಸದಸ್ಯರಿದ್ದರು. ಆದರೆ, ಕಳೆದ ಸಲ ಸಿದ್ದರಾಮಯ್ಯನವರು ಸಿಎಂ ಆದ ಮೇಲೆ ಒಬ್ಬರಿಗೆ ಲೋಕಸಭಾ ಟಿಕೆಟ್ ನೀಡಲಾಗುತ್ತಿದೆ. ಹಾಲಿ ಸಂಸತ್ತಿನಲ್ಲಿ ಕರ್ನಾಟಕದ ಮುಸ್ಲಿಂರಿಲ್ಲ ಎಂದು ದೂರಿದರು.
ಮುಸ್ಲಿಂಗೆ ಟಿಕೆಟ್ ನೀಡುವುದು ಕಡಿಮೆಗೊಳಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಮುಸ್ಲಿಂರು ಬೆಂಬಲಿಸಿಕೊAಡು ಬರುತ್ತಿö್ದದ್ದರೂ, ಕಡೆಗಣಿಸುವುದು ಸರಿಯಲ್ಲ ಎಂದು ಜಾಫ್ರಿ ಹೇಳಿದರು. ಹೆಚ್ಚಿನವರಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಬ್ದುಲï ಜಬ್ಬಾರ್ ಗೋಳಾ, ತಹಸೀನ್ ಅಲಿ ಜಮಾದಾರ, ಫಿರೋಜಖಾನ, ಅಬ್ದುಲ್ ಮೆಹಮೂದ, ಅಬ್ದುಲ್ ಅಜೀಮ್ ಮೊದಲಾದವರಿದ್ದರು.