ಹಾರೋಹಳ್ಳಿ ಪಟ್ಟಣ ಪಂಚಾಯತಿ ಮೇಲೆ ಲೋಕಾ ದಾಳಿ

lokayukta-conviction.
Published on

ಹಾರೋಹಳ್ಳಿ 

        ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಿಡೀರ್ ದಾಳಿ ನಡೆಸಿ ಹಲವಾರು ಕಡತಗಳ ಪರಿಶೀಲನೆ ನಡೆಸಿ ಮತ್ತು ಸಿಬ್ಬಂದಿಗಳ ವಿಚಾರಣೆ ನಡೆಸಿದರು.

           ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾಮನಗರ ಲೋಕಾಯುಕ್ತ ಎಸ್ ಪಿ ಸ್ನೇಹ ನೇತೃತ್ವದ ತಂಡ ದಾಳಿ ನಡೆಸಿ ಸಿಬ್ಬಂದಿಗಳು ಹೊರಹೋಗದಂತೆ ನಿರ್ಬಂಧ ಹೇರಿ ದಾಖಲೆಗಳ ಮತ್ತು ಕಡತಗಳ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಭಯಭೀತರಾಗಿ ಕಕ್ಕಾಬಿಕ್ಕಿಯಾದರು.

         ಹಾರೋಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಖಾತೆಯ ವಿಚಾರವಾಗಿ ಹಾಗೂ ಟ್ಯಾಕ್ಸ್ ಗೆ ಸಂಬಂಧಪಟ್ಟಂತೆ ಹಾಗೂ ಅಧಿಕಾರಿಗಳ ವಿರುದ್ಧ ಬೆಂಗಳೂರು ಲೋಕಾಯುಕ್ತ ಕೇಂದ್ರ ಕಚೇರಿಗೆ ದೂರು ದಾಖಲಾಗಿದ್ದವು ಈ ದೂರಿನ ಅನ್ವಯ ಅಧಿಕಾರಿಗಳ ತಂಡ ಪಟ್ಟಣ ಪಂಚಾಯಿತಿಗೆ ದಾಳಿ ನಡೆಸಿ ಖಾತೆ ಹಾಗೂ ಟ್ಯಾಕ್ಸ್ ಗೆ ಸಂಬಂಧಪಟ್ಟಂತೆ ಕಂಪ್ಯೂಟರ್ ಹಾಗೂ ವಿವಿಧ ಕಡತಗಳನ್ನು ಪರಿಶೀಲನೆ ನಡೆಸಿದರು.

       ಲೋಕಾಯುಕ್ತ ಎಸ್ಪಿ ಸ್ನೇಹ ರವರು ಮಾತನಾಡಿ ಬೆಂಗಳೂರು ಕೇಂದ್ರ ಕಚೇರಿಗೆ ಬಂದ ದೂರಿನ ಅನ್ವಯ ಇಂದು ಕಚೇರಿಯಲ್ಲಿನ ಕಡತಗಳನ್ನು ಪರಿಶೀಲನೆ ಮಾಡಲಾಯಿತು ಹಾಗೂ ಸಂಬಂಧಪಟ್ಟವರ ವಿಚಾರಣೆ ನಡೆಸಲಾಗಿದೆ ದಾಖಲಾತಿಗಳ ಪರಿಶೀಲನೆ ಹಾಗೂ ತನಿಖೆ ನಡೆಸಿ ಮುಂದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

         ಲೋಕಾಯುಕ್ತ ಇನ್ಸ್ಪೆಕ್ಟರ್ ಗಳಾದ ಅನಂತರಾಮ್, ಸಂದೀಪ್, ಹನುಮಂತ ಕುಮಾರ್ ಮತ್ತು ಸಿಬ್ಬಂದಿಗಳು ಇದ್ದರು. ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಶ್ವೇತಾಬಾಯಿ ಹಾಗೂ ಸಿಬ್ಬಂದಿಗಳು ದಾಳಿ ಸಂದರ್ಭದಲ್ಲಿ ಕಚೇರಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net