

ಚನ್ನಪಟ್ಟಣ: ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ವಿಳಂಬ ಹಾಗೂ ಅಕ್ರಮ, ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾ ಅಧಿಕಾರಿಗಳು ಬುಧವಾರ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಡಿವೈಎಸ್‌ಪಿ ರಾಜೇಶ್ ನೇತೃತ್ವದ ಅಧಿಕಾರಿಗಳ ತಂಡ ಕಚೇರಿಯಲ್ಲಿನ ಹಾಜರಾತಿ ಪುಸ್ತಕ, ರಿಜಿಸಾರ್, ಮೇಮೋ ಸೇರಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಬೆಲಗ್ಗೆಯಿಂದ ರಾತ್ರಿವರೆಗೂ ಕಚೇರಿಯಲ್ಲೇ ಬೀಡುಬಿಟ್ಟ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯ ಪ್ರತಿ ವಿಭಾಗಗಳನ್ನು ಜಾಲಾಡಿ, ಹಲವಾರು ಕಡತಗಳು ಬಾಕಿ ಇರುವುದನ್ನು ಗಮನಿಸಿ ಈ ಬಗ್ಗೆ ಸಂಬಂಧಿಸಿದವರ ಬಳಿ ಮಾಹಿತಿ ಪಡೆದು, ಕಚೇರಿಗೆ ಬರುವ ಸಾರ್ವಜನಿಕರನ್ನು ವಿನಾಕಾರಣ ಅಲೆದಾಡಿಸದಂತೆ ಹಾಗೂ ಕೆಲಸ ಕಾರ್ಯಗಳನ್ನು ವಿಳಂಭ ಮಾಡದಂತೆ ತಾಕೀತು ಮಾಡಿದರು.