ವಸತಿ ನಿಲಯ ಮಂಜೂರು ಮಾಡಿ

02 Arakera Photo 01
ಆಲ್ಕೋಡ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಮಂಜೂರು ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಗೆ ಗ್ರಾಪಂ ಮಾಜಿ ಅಧ್ಯಕ್ಷ ಶರಣಬಸವ ನಾಯಕ, ನಾಗರಾಜ ಭೋವಿ, ಹನುಮಂತ ಶಾವಂತಗಲ್, ಕುಪ್ಪಯ್ಯ ಭೋವಿ ಮನವಿ ಸಲ್ಲಿಸಿದರು.
Published on

ಅರಕೇರಾ: ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಮಂಜೂರು ಮಾಡುವಂತೆ ತಾಲೂಕಿನ ಆಲ್ಕೋಡ ಗ್ರಾಮಸ್ಥರು ಡಿ.23ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಅಡಕಲಗುಡ್ಡ, ಅನ್ವರ, ಆಕಳಕುಂಪಿ, ಶಾವಂತಗಲ್, ಚಡಕಲಗುಡ್ಡ, ಭೂಮನಗುಂಡ, ಮಲ್ಲಾಪೂರ, ಆಲ್ಕೋಡ ಗ್ರಾಮಗಳಲ್ಲಿ ಹಿಂದುಳಿದ ವರ್ಗದವರ ಸಂಖ್ಯೆ ಹೆಚ್ಚಿದ್ದು, ಸಕಾಲಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ.

ಆದ್ದರಿಂದ, ಆಲ್ಕೋಡದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಸ್ಥಾಪನೆಗೆ ಮುಂದಾಗಬೇಕೆಂದು ಗ್ರಾಪಂ ಮಾಜಿ ಅಧ್ಯಕ್ಷ ಶರಣಬಸವ ನಾಯಕ, ನಾಗರಾಜ ಭೋವಿ, ಹನುಮಂತ ಶಾವಂತಗಲ್, ಕುಪ್ಪಯ್ಯ ಭೋವಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net