ಏ.14ರ ಬಳಿಕ ರಾಜ್ಯ ಸಹಜ ಸ್ಥಿತಿಯತ್ತ ಮರಳುವ ಸೂಚನೆ ನೀಡಿದ ಸಿಎಸ್ ವಿಜಯಭಾಸ್ಕರ್

CS Vijaybhaskar
Published on

ಬೆಂಗಳೂರು: ಏ.14ರ ಬಳಿಕ ರಾಜ್ಯ ಸಹಜ ಸ್ಥಿತಿಯತ್ತ ಮರಳುವ ಸೂಚನೆಯನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನೀಡಿದ್ದಾರೆ.

ಎಲ್ಲ ಇಲಾಖೆ ಮುಖ್ಯಸ್ಥರಿಗೆ ಟಿಪ್ಪಣಿ ಕಳಿಸಿರುವ ಅವರು, ಲಾಕ್​ಡೌನ್ ಅವಧಿ ಮುಕ್ತಾಯದ ನಂತರ ತಮ್ಮ ಅಧೀನದಲ್ಲಿನ ಇಲಾಖೆಗಳಲ್ಲಿ ತೆಗೆದುಕೊಳ್ಳಬೇಕಾಗಿರುವ ಪ್ರಮುಖ 10 ಕ್ರಮಗಳ ಬಗ್ಗೆ ಪಟ್ಟಿ ಮಾಡಿ ಏ.9ರೊಳಗೆ ಕಳುಹಿಸುವಂತೆ ಕೋರಿದ್ದಾರೆ. ಅಗತ್ಯ ಸೇವೆ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಇಲಾಖೆ ಮುಖ್ಯಸ್ಥರ ಹೊರತು ಜಿಲ್ಲಾ ಮತ್ತು ತಾಲೂಕು ಹಂತದ ಕಚೇರಿಗಳು ಸ್ತಬ್ಧವಾಗಿವೆ. ಹೀಗಾಗಿ ಪುನಃ ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸುವ ಉದ್ದೇಶದಿಂದ ಇಲಾಖೆಗಳ ಆದ್ಯತೆಗಳೇನು ಎಂಬುದನ್ನು ಮುಖ್ಯಕಾರ್ಯದರ್ಶಿ ಬಯಸಿದ್ದಾರೆ.

ರಸ್ತೆ, ಸೇತುವೆ ವಿಚಾರಕ್ಕೆ ಬಂದರೆ ಇಲಾಖೆಯ ಆದ್ಯತೆ ಏನು, ಅನಿವಾರ್ಯ ಕಾಮಗಾರಿ ಯಾವುದಿದೆ, ನೀರಾವರಿ ಯೋಜನೆ ಪೈಕಿ ಅಗತ್ಯ ಆಗಬೇಕಾದ ಕೆಲಸ ಯಾವುದು, ಮೀನುಗಾರಿಕೆ ಇಲಾಖೆ ಯಾವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಿದೆಂಬ ವಿವರಣೆ ಕೊಡಬೇಕು. ಮುಂದಿನ ಶೈಕ್ಷಣಿಕ ವರ್ಷದ ತಯಾರಿ, ಪುಸ್ತಕ ಮುದ್ರಣ, ಪರೀಕ್ಷೆ ಮೌಲ್ಯಮಾಪನದ ವಿವರಣೆ. ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವಾಗ ಮುಂದಿನ ಅಗತ್ಯಗಳನ್ನು ಹೇಗೆ ನಿಭಾಯಿಸ ಬಹುದೆಂಬುದು ಇಲಾಖೆಗಳ ವಿವರಣೆಯಿಂದ ಸ್ಪಷ್ಟವಾಗಲಿದೆ. ಈ ಮೂಲಕ ಸರ್ಕಾರ ತನ್ನ ದಾರಿ ಸ್ಪಷ್ಟಮಾಡಿಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net