ಸ್ಥಳೀಯ ಅದಾಲತ್ ಸೆಪ್ಟೆಂಬರ್ 3ಕ್ಕೆ ಮುಂದೂಡಿಕೆ

aadalath
Published on

ಕಾಸರಗೋಡು: ಆಗಸ್ಟ್ 30ರಂದು ಕಾಸರಗೋಡು ನಗರಸಭಾ ಪುರಭವನದಲ್ಲಿ ನಡೆಯಬೇಕಿದ್ದ ಸ್ಥಳೀಯ ಅದಾಲತನ್ನು ಸೆಪ್ಟೆಂಬರ್ 3 ಕ್ಕೆ ಮುಂದೂಡಲಾಗಿದೆ. ಸಾರ್ವಜನಿಕರಿಗೆ ಆಗಸ್ಟ್ 29ರ ತನಕ adalath.lsgkerala.gov.in ಎಂಬ ವೆಬ್‌ಸೈಟ್ ಮೂಲಕ ದೂರು ಸಲ್ಲಿಸಬಹುದಾಗಿದೆ. 3ರಂದು ನೇರವಾಗಿ ಅರ್ಜಿ ಸಲ್ಲಿಸಬಹುದು. ದೂರು, ಅರ್ಜಿಗಳನ್ನು ಪರಿಶೋಧಿಸಿ ಅದಾಲತ್‌ನಲ್ಲಿ ಪಾಲ್ಗೊಳ್ಳುವ ಸಚಿವರ ಉಪಸ್ಥಿತಿಯಲ್ಲಿ ಪರಿಗಣಿಸಿ ತೀರ್ಪುನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net