ಸೆ.1ರಿಂದ ಜಾನುವಾರು ಗಣತಿ

Published on

ಸರ್ವೇ ಸುಲಭಗೊಳಿಸಲು 21ಲೈವ್‌ಸ್ಟಾಕ್ ಸೆನ್ಸಸ್ ಆ್ಯಪ್ ಬಳಕೆ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಸೆ.1ರಿಂದ 21ನೇ ಜಾನುವಾರು ಗಣತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಹಿಂದೆ ಮಾಹಿತಿಯನ್ನು ಪುಸ್ತಕದಲ್ಲಿ ನಮೂದಿಸುತ್ತಿದ್ದ ಗಣತಿಕಾರರು, ಇದೇ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಬಳಸಿ ಸರ್ವೇ ಕೈಗೊಳ್ಳಲಿದ್ದು ಮನೆ ಮನೆಗೆ ತೆರಳಿ, ದನ, ಎತ್ತು ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಎಮು ಹಾಗೂ ಆಸ್ಟ್ರಿಚ್ ಹಕ್ಕಿಗಳು, ಹಾಗೆಯೇ ಬೀಡಾಡಿ ದನ, ನಾಯಿಗಳ ಸಂಖ್ಯೆಯ ವಾಹಿತಿಯನ್ನು ಸಂಗ್ರಹಿಸಲಿದ್ದಾರೆ. 1919ರಿಂದಲೂ ಜಾನುವಾರು ಗಣತಿ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ನಡೆಯುತ್ತಿದ್ದು ಕಳೆದ 100 ವರ್ಷಗಳಲ್ಲಿ 20 ಗಣತಿ ನಡೆದಿದೆ. ಇದು 2024ನೇ ವರ್ಷದಲ್ಲಿ 21ನೇ ಗಣತಿ ಪ್ರಕ್ರಿಯೆ ನಡೆಯುತ್ತಿದೆ.
ಸರ್ಕಾರವು ಮುಂದಿನ ವರ್ಷಗಳಲ್ಲಿ ವಿಶೇಷ ಯೋಜನೆಯನ್ನು ಸಿದ್ಧಪಡಿಸಲು ಅಗತ್ಯವಿರುವ ಅಂಶಗಳನ್ನು ತಿಳಿದುಕೊಳ್ಳುವುದೇ ಸರ್ವೇ ಮುಖ್ಯ ಉದ್ದೇಶ. ಇದರ ಆಧಾರದಲ್ಲಿಯೇ ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ ನಿಯಮಗಳು ರೂಪುಗೊಳ್ಳಲಿವೆ.

ಗಣತಿಗೆ ವಿಶೇಷ ಆ್ಯಪ್
ಕೇಂದ್ರ ಪಶುಸಂಗೋಪನಾ ಇಲಾಖೆಯಿಂದಲೇ 21ಲೈವ್‌ಸ್ಟಾಕ್ ಸೆನ್ಸಸ್ (21 ಔಜಿಛಿಠಿಟ್ಚ ್ಚಛ್ಞಿಠ್ಠ) ಎನ್ನುವ ಪ್ರತ್ಯೇಕ ಆ್ಯಪ್ ಅಭಿವದ್ಧಿಪಡಿಸಲಾಗಿದೆ. ಇದರ ಬಗ್ಗೆ ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ. ಮೊದಲು ಪುಸ್ತಕದಲ್ಲಿ 200 ಕಾಲಂಗಳನ್ನು ಭರ್ತಿ ವಾಡಬೇಕಾಗಿತ್ತು. ಈ ಬಾರಿ ಸರ್ವೇ ಚುಟುಕಾಗಿರುತ್ತದೆ. ನೆಟ್‌ವರ್ಕ್ ಇಲ್ಲದಿದ್ದರೂ ತಂತ್ರಾಂಶ ಕಾರ್ಯ ನಿರ್ವಹಿಸುತ್ತದೆ.

4 ತಿಂಗಳ ಸರ್ವೇ ಕಾರ್ಯ
ರಾಜ್ಯದಲ್ಲಿ ಪಶುಸಂಗೋಪನಾ ಇಲಾಖೆಯಿಂದ 4 ತಿಂಗಳು ಬಹತ್ ಸಮೀಕ್ಷಾ ಕಾರ್ಯ ನಡೆಯಲಿದ್ದು ವಾಸ್ಟರ್ ಟ್ರೇನರ್‌ಗಳ ತರಬೇತಿ ಪೂರ್ಣಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಭಾ ಭವನದಲ್ಲಿ ಆ.20ರಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಾಗಾರ ಕೈಗೊಳ್ಳಲಾಗಿತ್ತು.

ಸರ್ವೇಗೆ ಜಿಲ್ಲೆಯಲ್ಲಿ ಸಿಬ್ಬಂದಿ
ಜಿಲ್ಲೆಯಲ್ಲಿ ಗಣತಿ ಪ್ರಕ್ರಿಯೆಗೆ ಅಗತ್ಯ ಸಿಬ್ಬಂದಿ ನಿಯೋಜಿಸಿದ್ದು 72 ಗಣತಿದಾರರು ಮತ್ತು 20 ಮೇಲ್ವಿಚಾರಕರು ಇದ್ದು ನಗರ ಭಾಗದಲ್ಲಿ 6000 ಮನೆಗಳಿಗೊಬ್ಬ ಮತ್ತು ಗ್ರಾಮೀಣ ಭಾಗದಲ್ಲಿ 4500 ಮನೆಗಳಿಗೊಬ್ಬ ಗಣತಿದಾರರನ್ನು ನಿಯೋಜಿಸಲಾಗಿದೆ. ಇವರು ಪ್ರತಿ ಮನೆ ಮನೆಗೆ ತೆರಳಿ ಜಾನುವಾರು ತಳಿ, ವಯಸ್ಸು, ನಿರ್ವಹಣೆಯ ಪೈಕಿ ವಿವಿಧ ವಲಯದ ರೈತರು ಬಗೆಗಿನ ಮಾಹಿತಿ ಸಂಗ್ರಹಿಸಲಿದ್ದಾರೆ. ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಗಳು ಉಸ್ತುವಾರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮನೆ ಮನೆಗೆ ಜಾನುವಾರು ಗಣತಿದಾರರು ಬರಲಿದ್ದಾರೆ. ಇದಕ್ಕೆ ಸೂಕ್ತ ಮಾಹಿತಿ ನೀಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net