ಉದ್ಯೋಗ ಖಾತ್ರಿಯಿಂದ ಸ್ವಾವಲಂಬಿ ಬದುಕು

26 RTL 02- Khatri
Published on

ರಟ್ಟಿಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯ ಪಡೆದ ಕಾರ್ವಿುಕರು, ರೈತರು ಇಂದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ಬೊಮ್ಮಣ್ಣನವರ ಹೇಳಿದರು. "

ಪಟ್ಟಣದ ತಾ.ಪಂ. ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಹಾವೇರಿ, ತಾಲೂಕು ಪಂಚಾಯಿತಿ ರಟ್ಟಿಹಳ್ಳಿ ಸಹಯೋಗದಲ್ಲಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಯಿಂದ ಖಾತ್ರಿಯಾಗಿ ನೂರು ದಿನಗಳ ಕೆಲಸ ನೀಡಲಾಗುತ್ತಿದೆ. ಆ ಮೂಲಕ ವಲಸೆ ತಪ್ಪಿಸುವುದು, ಜಲ ಮೂಲಗಳ ಸಂರಕ್ಷಣೆ ಮಾಡುವುದು, ಸ್ತಿ್ರ ಪ್ರಧಾನ ಕುಟುಂಬಕ್ಕೆ ಆಧ್ಯತೆ ನೀಡಿ ಮಹಿಳಾ ಸಬಲೀಕರಣಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಹಾಯಕ ನಿರ್ದೇಶಕ ಪ್ರದೀಪ್ ಗಣೇಶ್ಕರ್ ಮಾತನಾಡಿ, ಈಗಾಗಲೇ ಕ್ರಿಯಾಯೋಜನೆಯಲ್ಲಿ ಬದುವು ನಿರ್ಮಾಣ ,ಕೃಷಿ ಹೊಂಡ ನಿರ್ವಣ, ದನದ ಕೊಟ್ಟಿಗೆ ನಿರ್ಮಾಣ ಸೇರಿ ವಿವಿಧ ವೈಯಕ್ತಿಕ ಕಾಮಗಾರಿ ಹಾಗೂ ಕೆರೆ, ಹಳ್ಳ, ಗೋಮಾಳ ,ಸ್ಮಶಾನ ಅಭಿವೃದ್ಧಿ ಸೇರಿ ಹಲವು ಸಮುದಾಯ ಕಾಮಗಾರಿ ಸೇರಿಸಲಾಗಿದೆ. ರೈತರು ನರೇಗಾ ಯೋಜನೆಯಡಿ ತಮಗೆ ಬೇಕಾದ ಕಾಮಗಾರಿ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಎಂದರು.

ಸಹಾಯಕ ನಿರ್ದೇಶಕರಾದ ದೇವರಾಜ್ ಸಣ್ಣಕಾರ್ಗೆರ , ಪಿಡಿಒ ದಿನೇಶ್ ಟಿ.ಎಚ್, ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ, ತಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net