ಸಾಹಿತ್ಯದಿಂದ ಸಮಾಜ ಬೆಳೆಯಲು ಸಾಧ್ಯ

kalakendra
ಸದಾನಂದ ರಂಗಮಂಟಪ ಸಾಲಿಗ್ರಾಮದ ಗುಂಡ್ಮಿಯಲ್ಲಿ ಹಮ್ಮಿಕೊಂಡ ಯಕ್ಷ ಉತ್ಸವಕ್ಕೆ ಸಾಲಿಗ್ರಾಮ ಕಾರ್ಕಡದ ರತ್ನಾಕರ ಸೋಮಯಾಜಿ ಚಾಲನೆ ನೀಡಿದರು.
Published on

ಕೋಟ: ಒಂದು ಊರಿಗೆ ದೇವಸ್ಥಾನ ಎಷ್ಟು ಮುಖ್ಯವೋ ಕಲೆ, ಸಾಹಿತ್ಯದ ಕಂಪು ಅಷ್ಟೇ ಮುಖ್ಯ. ಯಾವ ಸಮಾಜ ಸಾಂಸ್ಕೃತಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತದೋ ಆ ಸಮಾಜ ಸುಸಂಸ್ಕೃತವಾಗಿ ಬೆಳೆಯುತ್ತದೆ ಎಂದು ಸಾಲಿಗ್ರಾಮ ಕಾರ್ಕಡದ ರತ್ನಾಕರ ಸೋಮಯಾಜಿ ಅಭಿಪ್ರಾಯಪಟ್ಟರು.

ಕೊಂಡದಕುಳಿ, ಕುಂಭಾಶಿ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸದಾನಂದ ರಂಗಮಂಟಪ ಸಾಲಿಗ್ರಾಮದ ಗುಂಡ್ಮಿಯಲ್ಲಿ ಹಮ್ಮಿಕೊಂಡ ಯಕ್ಷ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಕ್ಷಗಾನ ಕಲಾಕೇಂದ್ರ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ, ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕಾರ್ಯದರ್ಶಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ಘಟಕ ಅಧ್ಯಕ್ಷ ರಾಮಚಂದ್ರ ಐತಾಳ ಉಪಸ್ಥಿತರಿದ್ದರು. ರಾಮಚಂದ್ರ ಹೆಗಡೆ ಕೊಂಡದಕುಳಿ ಸ್ವಾಗತಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು. ಬಳಿಕ ಧರ್ಮಾಂಗದ ದಿಗ್ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net