

ಕುಂದಾಪುರ: ಭಾಷೆ ಒಂದು ಜನಾಂಗ ಮತ್ತು ಸಂಸ್ಕೃತಿ ಅಸ್ಮಿತೆ. ಭಾಷೆ ಬಳಕೆಯಿಂದ ಅದರ ಉಳಿವು ಮತ್ತು ಬೆಳವಣಿಗೆ ಸಾಧ್ಯ. ವ್ಯಕ್ತಿಗೆ ಅಭಿವ್ಯಕ್ತಿಯಿಂದಲೇ ನೆಲೆ ಮತ್ತು ಬೆಲೆ. ಕಾಲೇಜು ಹಂತದಲ್ಲಿ ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಸಮರ್ಥ ಸಂವಹನಕಾರರಾದಲ್ಲಿ ಉಜ್ವಲ ಭವಿಷ್ಯ ಹೊಂದಬಹುದು ಎಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಸಂಜೀವ ಕುದ್ಪಾಜೆ ಹೇಳಿದರು.
ಕುಂದಾಪುರ ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಐಕ್ಯೂಎಸಿ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ಭಾಷೆ ಮತ್ತು ಸಂವಹನ ಕಲೆ’ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಪ್ರಾಂಶುಪಾಲ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಚಾಲಕ ನಾಗರಾಜ ಯು., ವಿದ್ಯಾರ್ಥಿ ಪ್ರತಿನಿಧಿಗಳಾದ ರಶ್ಮಿ ಉಡುಪ ಮತ್ತು ಶಮಂತ ಕುಲಾಲ್‌ಉಪಸ್ಥಿತರಿದ್ದರು. ನಾಗರಾಜ ವೈದ್ಯ ಎಂ. ಸ್ವಾಗತಿಸಿ, ಕವನಾ ಮತ್ತು ತಂಡದವರು ಪ್ರಾರ್ಥಿಸಿದರು. ಕೃತಿಕಾ ಕಾರ್ಯಕ್ರಮ ನಿರೂಪಿಸಿ, ರಶ್ಮಿ ಉಡುಪ ವಂದಿಸಿದರು.