ನಿರಂತರ ಸಾಧನೆಯಿಂದ ಸಾಹಿತ್ಯ ಸೃಷ್ಟಿ

nanda
ಎರ್ಮಾಳು ರಾಮಕೃಷ್ಣ ರಾಯರ ನಂದ ನಂದನ ಕವನ ಸಂಕಲನವನ್ನು ವಿದ್ಯಾಭೂಷಣ ಬಿಡುಗಡೆಗೊಳಿಸಿದರು.
Published on

ಪಡುಬಿದ್ರಿ: ನಿರಂತರ ಸಾಧನೆಯಿಂದ ಮಾತ್ರ ಗೇಯ ಸಾಹಿತ್ಯ ಸೃಷ್ಟಿಯಾಗುತ್ತದೆ. ಹೀಗೆ ರಚಿತವಾದ ಗೀತೆ ಯಾವುದೇ ಆಗಿರಲಿ ಅದನ್ನು ಒಂದೆರಡು ಬಾರಿ ಓದಿದಾಗಲೆ ಅದಕ್ಕೊಪ್ಪುವ ರಾಗ ನಮ್ಮ ಮನದಲ್ಲಿ ಮೂಡಿಬರುತ್ತದೆ. ಇದಕ್ಕೆ ಆಳವಾದ ಸಂಗೀತ ಜ್ಞಾನ ಇರಬೇಕಾಗಿಲ್ಲ ಎಂದು ಗಾನ ವಿದ್ಯಾನಿಧಿ ವಿದ್ಯಾಭೂಷಣ ಹೇಳಿದರು.

ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರ್ಮಾಳು ರಾಮಕೃಷ್ಣ ರಾಯರ ನಂದ ನಂದನ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ಮಧ್ವರಾಯ ಭಟ್, ಉದ್ಯಮಿ ಶೇಖರ ಶೆಟ್ಟಿ ಉಪಸ್ಥಿತರಿದ್ದರು. ಶಾರದಾತನಯ ಎರ್ಮಾಳು ಸ್ವಾಗತಿಸಿದರು. ಹಿರಿಯ ಸಾಹಿತಿ ಬಿ.ಜನಾರ್ದನ ಭಟ್ ಕೃತಿ ಪರಿಚಯ ಮಾಡಿದರು. ಭಾಗವತ ಪ್ರತಿಷ್ಠಾನದ ನಾಗರಾಜ ರಾವ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net