ಕಡಲ ತೀರದಲ್ಲಿ ಜಾನುವಾರು ಕಳೇಬರ ಪತ್ತೆ

crime
Published on

ಗಂಗೊಳ್ಳಿ: ಗೋಹತ್ಯೆ ಹಾಗೂ ಅಕ್ರಮ ಗೋ ಸಾಗಾಟ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ಗಂಗೊಳ್ಳಿ ಇಂದು ಮತ್ತೆ ಇದೇ ವಿಚಾರಕ್ಕೆ ಸುದ್ದಿಯಾಗಿದೆ.

ಗಂಗೊಳ್ಳಿ ಗ್ರಾಮದ ಲೈಟ್‌ಹೌಸ್ ಕಡಲ ತೀರದಲ್ಲಿ ಬುಧವಾರ ಸಂಜೆ ಸುಮಾರು ಮೂರು ಜಾನುವಾರುಗಳ ಕಳೇಬರ ಪತ್ತೆಯಾಗಿದ್ದು, ಅಕ್ರಮ ಗೋಹತ್ಯೆ ಶಂಕೆ ವ್ಯಕ್ತವಾಗಿದೆ. ಗೋಣಿ ಚೀಲದಲ್ಲಿ ತುಂಬಿದ ಸ್ಥಿತಿಯಲ್ಲಿ ಜಾನುವಾರು ಕಳೇಬರ ಪತ್ತೆಯಾಗಿದ್ದು, ಕಡಲ ತೀರದ ವಿವಿಧೆಡೆ ಜಾನುವಾರು ರುಂಡ ಪತ್ತೆಯಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಗಂಗೊಳ್ಳಿಯಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಡಲ ತೀರದಲ್ಲಿ ಜಾನುವಾರು ಕಳೆಬರ ಪತ್ತೆಯಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು, ಹಿಂದುಗಳ ಧಾರ್ಮಿಕ ಹಬ್ಬಗಳ ಸಂದರ್ಭ ಇಂತಹ ಕೃತ್ಯ ನಡೆಸಿ ಹಿಂದುಗಳ ಭಾವನೆ ಕೆರಳಿಸುವ ಕೆಲಸ ನಡೆಯುತ್ತಿದೆ. ಅಕ್ರಮವಾಗಿ ಗೋ ಹತ್ಯೆ ಮಾಡಿ ಅದರ ಕಳೆಬರಗಳನ್ನು ಕಡಲಿಗೆ ಎಸೆದು ವಿಕೃತಿ ಮೆರೆಯುತ್ತಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net