

ನಗರಗೆರೆ: ಹೋಬಳಿಯ ವಾಟದಹೊಸಹಳ್ಳಿಯ ಶ್ರೀ ಸತ್ಯಸಾಯಿ ಪ್ರೌಢಶಾಲೆಯ ಆವರಣದಲ್ಲಿ ಎಲ್.ಕೆ.ಜಿ ಮಕ್ಕಳಿಗೆ ಪ್ರಿಯಾಂಕಾ ಪ್ರಮೋದ್ ಕಾರ್ತೀಕ ಚೈತ್ರಾ ಅವರಿಂದ ಸೋಮವಾರ ಅರಾಭ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಚಿಕ್ಕಬಳ್ಳಾಪುರ ಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೇಣುಗೋಪಾಲ ಮಾತನಾಡಿ, ಮುದ್ದೇನಹಳ್ಳಿಯ ಶ್ರೀ ಸದ್ಗುರು ಮಧುಸೂದನ ಸಾಯಿ ಕೃಪಾಕಟಾಕ್ಷದಿಂದ ಎಲ್ಕೆಜಿಯಿಂದ ಮೆಡಿಕಲ್ವರೆಗೊ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಅವರ ಆಶೀರ್ವಾದದಿಂದ ಪ್ರಿಯಾಂಕಾ ಪ್ರಮೋದ್ ಕಾರ್ತಿಕ ಚೈತ್ರಾ ಅವರು ತಾಯಂದಿರು ಹಾಗೂ ಗುರುಗಳ ಸಮ್ಮುಖದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುತ್ತಿರುವುದು ಶ್ಲಾನೀಯ.
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಪುಟ್ಟಪರ್ತಿ ಸಾಯಿಬಾಬಾ ಮಾರ್ಗದರ್ಶನದಲ್ಲಿ ಮಡಿವಾಳ ನಾರಾಯಣ ಭಟ್ಟರು 30 ವರ್ಷಗಳ ಹಿಂದೆ ಶಾಲೆಯಲ್ಲಿ ಪ್ರಥಮ ಪಾಠ ಆಚರಿಸುತ್ತಿದ್ದರು. ಸನಾತನ ಧರ್ಮದ ಒಂದು ಪಾಠ ಈಗ ಈ ಸಂಸ್ಥೆಯಲ್ಲಿ ನಡೆಯುತ್ತಿದೆ. ದೇಶದಲ್ಲಿ 14 ಸಾವಿರ ಗುರುಕುಲಗಳಿದ್ದವು. ಈ ಗುರುಕುಲಗಳಲ್ಲಿ ಮಕ್ಕಳಿಗೆ ಸಂಸತದ ಜತೆಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಹೇಳಿಕೊಡಲಾಗುತಿತ್ತು. ಇಂತಹ ಕಾರ್ಯ ದೇಶಾದ್ಯಂತ ಸತ್ಯಸಾಯಿ ಸಂಸ್ಥೆಗಳಲ್ಲಿ ಮಾತ್ರ ನಡೆಯುತ್ತಿದೆ. ವಿದ್ಯಾದಾನ ಶ್ರೇಷ್ಠದಾನವಾಗಿದ್ದು, ಇದು ನಮ್ಮ ಪುಣ್ಯ ಎಂದರು.
ವಾಟದಹೊಸಹಳ್ಳಿ ಸತ್ಯಸಾಯಿ ಪ್ರೌಢಶಾಲೆ ಕಾರ್ಯದರ್ಶಿ ಸತ್ಯನಾರಾಯಣರಾವ್ ಮಾತನಾಡಿ, ಮಕ್ಕಳು ದೇವರ ಸ್ವರೂಪ. ತಂದೆ ತಾಯಿಗಳ ನಡೆಯನ್ನು ಅನುಸರಿಸುತ್ತಾರೆ. ಮುಗ್ಧ ಮನಸ್ಸಿನ ಮಕ್ಕಳಿಗೆ ಸರಿಯಾದ ಮಾರ್ಗ ತೋರಿಸುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳಲ್ಲಿ ಗೌರವ ಮನೋಭಾವ ಬೆಳಸಬೆಕು. ಕೆಲಸದ ಒತ್ತಡಕ್ಕೆ ಒಳಗಾಗಿ ಮಕ್ಕಳ ಕೈಗೆ ಮೊಬೈಲ್ ನೀಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.
ಮಕ್ಕಳಿಗೆ ಬ್ಯಾಗ್, ಸ್ಲೇಟ್ ಜಾಮಿಟ್ರಿ ಬಾಕ್ಸ್, ಪುಸ್ತಕ ಇತರ ಸಾಮಗ್ರಿ ನೀಡಲಾಯಿತು. ಪ್ರಿಯಾಂಕಾ ಪ್ರಮೋದ್, ಕಾರ್ತಿಕ್, ಚೈತ್ರಾ, ಜಿಲ್ಲಾ ಬ್ರಾಹ್ಮಣರ ಸಂದ ಅದ್ಯ ನಾಗಭೂಷಣರಾವ್, ಅಖಿಲಾ ಕರ್ನಾಟಕ ಬ್ರಾಹ್ಮಣ ಸಂದ ಸಂಚಾಲಕ ರವೀರ್, ಮಂಜುನಾಥ, ಗೀತಾ, ಲಕ್ಷಿ$್ಮ, ನಳಿನಿ, ಪ್ರಮೋದ್, ರಂಗನಾದ್, ಲ್ಮವೇಣುಗೋಪಾಲ್, ವೇಣುಗೋಪಾಲ್, ಪ್ರಸನ್ನ ಕುಮಾರ್, ಕವಿಪವನ್ ಕುಮಾರ್, ಶಿಕರು, ಸಿಬ್ಬಂದಿ ಪಾಲಕರು ಇದ್ದರು