ಜಾನ್ಞದ ಹಸಿವು ಹೆಚ್ಚಿಸಲು ಅಕ್ಷರಾಭ್ಯಾಸ ಸಹಕಾರಿ

byn (5)
Published on

ಹೆಬ್ರಿ: ಎಲ್ಲಿ ದೇವರಿಗೆ ಪೂಜೆ ನಡೆಯುತ್ತದೆಯೋ ಅದೇ ಮಂದಿರ. ಮಕ್ಕಳಿಗೆ ದೇವ ಮತ್ತು ದೇಹ ಶೃದ್ಧೆಯನ್ನು ಕಲಿಸಬೇಕು. ಅದಕ್ಕಾಗಿ ಮಂತ್ರದೀಕ್ಷೆ ಅವಶ್ಯಕ. ಮಕ್ಕಳಲ್ಲಿ ಅಕ್ಷರಗಳ ಬಗ್ಗೆ ಆಸಕ್ತಿಯನ್ನು ಮೂಡಿಸಲು ಜ್ಞಾನದ ಹಸಿವು ಹೆಚ್ಚಿಸಲು ಅಕ್ಷರಾಭ್ಯಾಸ ಸಹಕಾರಿಯಾಗಿದೆ ಎಂದು ತುಳಸಿ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣರಾಯ ಶ್ಯಾನುಭಾಗ್ ಹೇಳಿದರು.

ಹಳ್ನಾಡು ತುಳಸಿ ವಿದ್ಯಾಮಂದಿರ ಆಂಗ್ಲ ವಾಧ್ಯಮ ಶಾಲೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಅರ್ಚಕ ಶ್ರೀನಿವಾಸ ಹಾಗೂ ಕೇಶವ ಅಡಿಗರ ನೇತೃತ್ವದಲ್ಲಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಶಿಕ್ಷಕಿ ರೇಷ್ಮಾ ಪ್ರದೀಪ್, ಪಾಲಕರು ಹಾಗೂ ಶಿಕ್ಷಕ ವೃಂದದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net