ಹಣಕಾಸು ಸಂಸ್ಥೆಗಳು, ಗಿರಿವಿದಾರರು, ಲೇವದೇವಿಗಾರರ ಲೈಸೆನ್ಸ್ ನವೀಕರಣಕ್ಕೆ ಸೂಚನೆ

Published on

ಯಾದಗಿರಿ :  ಯಾದಗಿರಿ ಉಪ ವಿಭಾಗದಲ್ಲಿ 2020-21ರಲ್ಲಿ ನೋಂದಾಣಿಯಾದ ಮತ್ತು ನವೀಕರಿಸಿದ ಎಲ್ಲಾ ಹಣಕಾಸು ಸಂಸ್ಥೆಗಳು ಮತ್ತು ಗಿರಿವಿದಾರರು ಹಾಗೂ ಲೇವದೇವಿಗಾರರ ಲೈಸೆನ್ಸ್ಗಳನ್ನು 2025ರ ಎಪ್ರಿಲ್ 1 ರಿಂದ 2030ರ ಮಾರ್ಚ್ 31ರ ಅವಧಿಗಾಗಿ ನವೀಕರಣಕ್ಕೆ ಸೂಚಿಸಿದೆ ಎಂದು ಯಾದಗಿರಿ ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಶೀಮಾ ಅವರು ತಿಳಿಸಿದ್ದಾರೆ.

ಯಾದಗಿರಿ ಉಪ ವಿಭಾಗದಲ್ಲಿ 2020-21ರಲ್ಲಿ ನೊಂದಣಿಯಾದ ಮತ್ತು ನವೀಕರಿಸಿದ ಎಲ್ಲಾ ಹಣಕಾಸು ಸಂಸ್ಥೆಗಳ ಲೇವಾದೇವಿಗಾರರು ಮತ್ತು ಗಿರಿವಿದಾರರು ಲೈಸನ್ಸ್ಗಳನ್ನು ದಿನಾಂಕ 01-04-2025 ರಿಂದ 31-03-2030ರ ಅವಧಿಗಾಗಿ ನವೀಕರಣ ಅರ್ಜಿಗಳನ್ನು ಕರ್ನಾಟಕ ಮನಿಲೆಂಡಿAಗ್ ಕಾಯ್ದೆ 1961 ನಿಯಮ 5(2) ರನ್ವಯ ದಾಖಲಾತಿಗಳೊಂದಿಗೆ 2025ರ ಜನವರಿ 31ರ ಒಳಗೆ ಸಹಕಾರ ಸಂಘಗಳ ನಿಬಂಧಕರ ಕಛೇರಿ ಯಾದಗಿರಿ ಇಲ್ಲಿಗೆ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net