

ಬಂಕಾಪುರ: ಸಮೀಪದ ಲಕ್ಕಿಕೊಪ್ಪ ಗ್ರಾಮದಲ್ಲಿ ಆಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಕಾಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಲಕ್ಕಿಕೊಪ್ಪ ಗ್ರಾಮದ ಗಂಗಾಧರ ಶಿವಪ್ಪ ವಡಕನ್ನವರ ಬಂಧಿತ ವ್ಯಕ್ತಿ. ಬಂಧಿತನಿಂದ 3 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬಂಕಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಪಿಎಸ್ಐ ಸಂತೋಷ ಪಾಟೀಲ, ಎ.ಎಸ್ಐ ಎಸ್.ಎಂ. ವನಹಳ್ಳಿ, ಹೊನ್ನಪ್ಪ ಮಾಳಗಿ, ಎಂ.ಎಂ. ಜಾಧವ, ಮಂಜು ಲಮಾಣಿ, ಬಸವರಾಜ ಲಮಾಣಿ ಇದ್ದರು.