ಮದ್ಯ ಅಕ್ರಮ ಮಾರಾಟ ತಡೆಗಾಗಿ ಧರಣಿ

Aadesh naganuru
ಆದೇಶ ನಗನೂರು.
Published on

ಲಿಂಗಸುಗೂರು: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಅಕ್ರಮ ಮಾರಾಟ ತಡೆಗೆ ಆಗ್ರಹಿಸಿ ಪಟ್ಟಣದ ಗಡಿಯಾರ ಚೌಕ್ ವೃತ್ತದ ಬಳಿ ಆ.17ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿರುವುದಾಗಿ ನಾನಾ ಸಂಘಟನೆಗಳ ಜಂಟಿ ಹೋರಾಟ ಸಮಿತಿ ತಾಲೂಕು ಸಂಚಾಲಕ ಆದೇಶ ನಗನೂರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಟಿಯುಸಿಐ, ಎಐಆರ್‌ಡಬ್ಲುೃಒ, ಆರ್‌ವೈಎಫ್‌ಐ, ಆರ್‌ಸಿಎಫ್, ಅಮರ ಜ್ಞಾನಪೀಠ ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ಕಳೆದ ಜು.16 ರಿಂದ 19ರವರೆಗೆ 20 ಗ್ರಾಮಗಳಲ್ಲಿ 100 ಕಿ.ಮೀ. ಜಾಥಾ ನಡೆಸಿ ಮದ್ಯಅಕ್ರಮ ಮಾರಾಟ ತಡೆ, ಕೆರೆಗಳ ಒತ್ತುವರಿ ತೆರವು, ಜಲ ಜೀವನ ಮಿಷನ್ ಯೋಜನೆ ಕಳಪೆ ಕಾಮಗಾರಿ ನಿಯಂತ್ರಣ ಕುರಿತು ಅಬಕಾರಿ, ಪೊಲೀಸ್, ಕಂದಾಯ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಗಮನಕ್ಕೆ ತಂದರೂ ಕ್ರಮವಾಗಿಲ್ಲ.

ಹೀಗಾಗಿ ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಆ.17ರಿಂದ ಅನಿರ್ದಿಷ್ಟ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸಮಿತಿ ಸಂಚಾಲಕರಾದ ಎಂ.ನಿಸರ್ಗ, ತಿಪ್ಪಣ್ಣ, ರುಕ್ಮಿಣಿ, ಚಿದಾನಂದ, ನಾಗರಾಜ, ಶರಣಬಸವ, ರಶೀದ್ ಜಮಾದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net