

ಮೈಸೂರು: ರೌಡಿಶೀಟರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕರ್ತವ್ಯ ಲೋಪದಡಿಯಲ್ಲಿ ಪಿಎಸ್ಐ ಲೋಕೇಶ್ರನ್ನು ಅಮಾನತು ಮಾಡಲಾಗಿದೆ. ಈಚೆಗೆ ಕುಶಾಲನಗರದ ಹಾರಂಗಿ ಜಲಾಶಯದ ಅತಿಥಿಗೃಹದಲ್ಲಿ ರೌಡಿಶೀಟರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ಜತೆಗೆ ಪೋಟೋ ಕೂಡ ತೆಗೆಸಿಕೊಂಡಿದ್ದರು. ಈ ಬಗ್ಗೆ ಅಣ್ಣಯ್ಯ ಎಂಬುವವರು ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಲೋಕೇಶ್ ಅವರನ್ನು ಮಂಗಳವಾರ ಕರ್ತವ್ಯದಿಂದ ಅಮಾನತುಗೊಳಿಸಿರುವುದಾಗಿ ಎಸ್ಪಿ ರಿಷ್ಯಂತ್ ಆದೇಶಿಸಿದ್ದಾರೆ. ಇಲಾಖೆ ಅನುಮತಿ ಇಲ್ಲದೆ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೇಶವನ್ನು ಬಿಟ್ಟು ಬೇರೆ ಜಿಲ್ಲೆಗೆ ತೆರಳಿದ ಕಾರಣಕ್ಕೆ ಅಮಾನತುಗೊಳಿಸಲಾಗಿದೆ. (ದಿಗ್ವಿಜಯ ನ್ಯೂಸ್)