182 ಲೀಟರ್ ಮದ್ಯ ನಾಶ

16-11-HNPP 1
Published on

ಹೊಳೆನರಸೀಪುರ: ಅಬಕಾರಿ ಇಲಾಖೆಯು 24 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 182.19 ಲೀಟರ್ ಮದ್ಯ ಹಾಗೂ 6,300 ಲೀಟರ್ ಬಿಯರ್ ಅನ್ನು ಗುರುವಾರ ನಾಶ ಮಾಡಲಾಯಿತು.


4 ಪ್ರಕರಣಗಳ ಪೈಕಿ 14 ಪ್ರಕರಣಗಳು ಅಬಕಾರಿ ಇಲಾಖೆ, 10 ಪ್ರಕರಣಗಳು ಪೊಲೀಸ್, ಕಂದಾಯ ಇಲಾಖೆಗಳ ಮೂಲಕ ದಾಖಲಾಗಿದೆ. ಪ್ರಸ್ತುತ ತಾಲೂಕಿನಲ್ಲಿ 30 ಮದ್ಯದ ಅಂಗಡಿಗಳಿದ್ದು, ಪಟ್ಟಣದಲ್ಲಿ 14, ಗ್ರಾಮೀಣ ಪ್ರದೇಶಗಳಲ್ಲಿ 16 ಅಂಗಡಿಗಳಿವೆ ಎಂದು ಅಬಕಾರಿ ಉಪ ಅಧೀಕ್ಷಕ ರಾಜೇಶ್ ನಾಯಕ್ ಮಾಹಿತಿ ನೀಡಿದರು.


ತಾಲೂಕಿನಲ್ಲಿ ಹಳ್ಳಿಮೈಸೂರು, ನಾಗಲಾಪುರ ಸೇರಿದಂತೆ ಪಟ್ಟಣದ ಕೆಲವು ಮದ್ಯದಂಗಡಿಗಳಲ್ಲಿ ಬೆಳಗ್ಗೆಯೇ ಮದ್ಯ ಮಾರಾಟ ಮಾಡುತ್ತಿರುವುದು ಕೇಳಿ ಬರುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾವುದು ಎಂದರು.


ಇದೇ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಮದ್ಯವನ್ನು ಅಬಕಾರಿ ಸಿಬ್ಬಂದಿ ಸಹಕಾರದಿಂದ ನಾಶಪಡಿಸಲಾಯಿತು. ಅಬಕಾರಿ ಸಿಪಿಐ ಪಾಂಡುರಂಗ, ಕಂದಾಯ ಇಲಾಖೆಯ ರೋಷನ್, ಅಬಕಾರಿ ಇಲಾಖೆ ಸಹಾಯಕ ವ್ಯವಸ್ಥಾಪಕ ಯುದುಗಿರಿ ಗೌಡ, ರಮೇಶ್, ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net