ಲಯನ್ಸ್ ಕ್ಲಬ್ ಸಾಮಾಜಿಕ ಕಾರ್ಯ ಪ್ರಶಂಸನೀಯ

udgatane
ಆರ್ಡಿ, ಬೆಳ್ವೆ, ಗೋಳಿಯಂಗಡಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್‌ ಕಾರ್ಯಕ್ರಮವನ್ನು ಸ್ವಪ್ನಾ ಸುರೇಶ್ ಶನಿವಾರ ಉದ್ಘಾಟಿಸಿದರು
Published on

ಬೆಳ್ವೆ: ಆರ್ಡಿ, ಬೆಳ್ವೆ, ಗೋಳಿಯಂಗಡಿ ಲಯನ್ಸ್ ಕ್ಲಬ್ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಗುರುತಿಸಿಕೊಂಡು ಮುಂಚೂಣಿಯಲ್ಲಿರುವುದು ಪ್ರಶಂಸನೀಯ ಎಂದು ಉಪಜಿಲ್ಲಾ ಗವರ್ನರ್ ಲಯನ್ಸ್ ಜಿಲ್ಲೆ 317 ಸಿ ಪಿಎಂಜೆಎಫ್ ಸ್ವಪ್ನಾ ಸುರೇಶ್ ಹೇಳಿದರು.

ಆರ್ಡಿ, ಬೆಳ್ವೆ, ಗೋಳಿಯಂಗಡಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್‌ಗೆ ಶನಿವಾರ ಭೇಟಿ ನೀಡಿದ ಸಂದರ್ಭ ಮಾತನಾಡಿದರು. ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಅಧ್ಯಕ್ಷತೆ ವಹಿಸಿದರು. ಪಿಎಂಜೆಎಫ್ ಹರಿಪ್ರಸಾದ್ ರೈ, ಪ್ರಾಂತ್ಯಾಧ್ಯಕ್ಷ ಸೋಮನಾಥ ಹೆಗ್ಡೆ, ವಲಯಾಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ಕಾರ್ಯದರ್ಶಿ ವೈ.ಪಟ್ಟಾಭಿರಾಮ್ ಭಟ್ ಮರೂರು, ಲಯನ್ಸ್ ಕ್ಲಬ್ ಜಿಲ್ಲಾ ರಾಯಭಾರಿ ಅರುಣಕುಮಾರ್ ಹೆಗ್ಡೆ, ಲಯನ್ಸ್ ಕ್ಲಬ್ ವಿಸ್ತಾರಣಾಧಿಕಾರಿ ಹರ್ಷ ಶೆಟ್ಟಿ, ಆರ್ಡಿ, ಬೆಳ್ವೆ, ಗೋಳಿಯಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಣ್ಣಯ್ಯಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ ಯಳಂತೂರು, ಸ್ಥಾಪಾಕಾಧ್ಯಕ್ಷ ಬಿ.ರಾಜೇಂದ್ರ ಕಿಣಿ ಬೆಳ್ವೆ, ಮಾಜಿ ಅಧ್ಯಕ್ಷ ಬಿ.ಸತೀಶ್ ಕಿಣಿ ಬೆಳ್ವೆ, ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ವೈದ್ಯಕೀಯ ಚಿಕಿತ್ಸೆಗೆ ನೆರವು ವಿತರಿಸಲಾಯಿತು. ಕಾರ್ಯದರ್ಶಿ ಅಣ್ಣಯ್ಯ ಶೆಟ್ಟಿ ಸ್ವಾಗತಿಸಿದರು. ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿಕುಮಾರ್ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net