ಸಮಾಜಮುಖಿ ಕಾರ್ಯಗಳಲ್ಲಿ ಲಯನ್ಸ್‌ಗೆ ಕೀರ್ತಿ

22blrp1
Published on

ಬೇಲೂರು: ಲಯನ್ಸ್ ಸೇವಾ ಸಂಸ್ಥೆ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಪಡೆಯುತ್ತಿದೆ ಎಂದು ಸಂಸ್ಥೆಯ ಪದಗ್ರಹಣ ಅಧಿಕಾರಿ ಸಂಜೀತ್ ಶೆಟ್ಟಿ ಹೇಳಿದರು.


ತಾಲೂಕಿನ ಅರೇಹಳ್ಳಿಯ ರೋಟರಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ 2024-25 ನೇ ಸಾಲಿನ ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆಗೆ ಇಬ್ಬರು ಹೊಸ ಸೇವಕರು ಸೇರ್ಪಡೆಯಾಗುತ್ತಿರುವುದು ಖುಷಿ ತಂದಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ನೂತನ ಸದಸ್ಯರನ್ನು ತಂಡಕ್ಕೆ ಸೇರ್ಪಡೆಗೊಳಿಸಿ, ಅರೇಹಳ್ಳಿ ಕ್ಲಬ್‌ಗೆ ಕೀರ್ತಿ ತರಲು ಎಲ್ಲ ಸದಸ್ಯರು ಸಹಕರಿಸಬೇಕು ಎಂದರು.


ನೂತನ ಅಧ್ಯಕ್ಷ ಕೆ.ಎನ್.ಸಂತೋಷ್ ಕುಮಾರ್ ಮಾತನಾಡಿ, ಈ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಆಯ್ದ ಸರ್ಕಾರಿ ಶಾಲೆಗಳಿಗೆ ಕಲಿಕಾ ಪರಿಕರಗಳನ್ನು ಒದಗಿಸಲು ಯೋಜನೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.


ಕಾರ್ಯದರ್ಶಿ ಎಂ.ಎ.ಪೃಥ್ವಿ, ಖಜಾಂಚಿ ಬೃಂದನ್ ಅಧಿಕಾರ ಸ್ವೀಕರಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಂತೀಯ ಅಧ್ಯಕ್ಷ ರಾಬಿ ಸೋಮಯ್ಯ, ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net