

ಸಿದ್ದಾಪುರ: ಮಾನವನು ಕಷ್ಟದಲ್ಲಿದ್ದಾಗ ಸಹಕರಿಸುವುದೇ ನಿಜವಾದ ಧರ್ಮ. ಲಯನ್ಸ್ ಅಂತಾರಾಷ್ಟ್ರೀಯ ಸಮೂಹವು ಅನೇಕ ಉತ್ತಮ ಹಾಗೂ ಮಾನವೀಯ ನೆರವಿಗೆ ಸಹಕರಿಸುತ್ತದೆ. ಕಷ್ಟದಲ್ಲಿರುವವರಿಗೆ ನೆರವು ನೀಡುತ್ತದೆ ಎಂದು ಲಯನ್ಸ್ ಪ್ರಾದೇಶಿಕ ಅಧ್ಯಕ್ಷ ಆರ್.ಎಚ್. ನಾಯಕ ಗೋಕರ್ಣ ಹೇಳಿದರು.
ಸಿದ್ದಾಪುರ ಲಯನ್ಸ್ ಕ್ಲಬ್ಗೆ ಅಧಿಕೃತ ಭೇಟಿ ನೀಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆದ ಜಿ.ಜಿ. ಹೆಗಡೆ ಬಾಳಗೋಡ ದಂಪತಿಯನ್ನು ಅಭಿನಂದಿಸಿ ನಂತರ ಲಯನ್ಸ್ ಸದಸ್ಯರನ್ನುದ್ದೇಶಿಸಿ ಅವರು ಶನಿವಾರ ಮಾತನಾಡಿದರು.
ಜಿಲ್ಲಾ ಮಾಜಿ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ ಮಾತನಾಡಿ, ಲಯನ್ಸ್ ಸಂಸ್ಥೆಗಳು ಜಾಗತಿಕ ವ್ಯಾಪ್ತಿ ಹೊಂದಿದ್ದು, ಸೇವಾ ಕ್ಷೇತ್ರದಲ್ಲಿ ಪ್ರಬಲ ಸಂಸ್ಥೆಯಾಗಿ ಶಿಕ್ಷಣ, ಆರೋಗ್ಯ, ಸಮುದಾಯದ ಒಳಿತಿಗಾಗಿ ಸದಾ ಶ್ರಮಿಸುತ್ತಿದೆ ಎಂದರು.
ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಜಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನೆ ಸ್ವೀಕರಿಸಿ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿದರು. ಲಯನ್ಸ್ ವಲಯ ಅಧ್ಯಕ್ಷೆ ಶಾಮಲಾ ಹೆಗಡೆ ಹೂವಿನಮನೆ, ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಶ್ವತ್ಥ ಹೆಗಡೆ, ಶಿರಸಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ವಿನಾಯಕ ಭಾಗ್ವತ್, ಕೋಶಾಧ್ಯಕ್ಷ ವೇಣುಗೋಪಾಲ, ಅಹಲ್ಯಾ ಆರ್.ಎಚ್. ನಾಯ್ಕ ಗೋಕರ್ಣ ಉಪಸ್ಥಿತರಿದ್ದರು.
ಉಷಾ ಕಿಣಿ ಪ್ರಾರ್ಥಿಸಿದರು. ಐ.ಕೆ. ಪಾಟೀಲ ಧ್ವಜವಂದನೆ ಮಾಡಿದರು. ಆಕಾಶ ಹೆಗಡೆ ಗುಂಜಗೋಡ ನಿರೂಪಿಸಿದರು. ಕಾರ್ಯದರ್ಶಿ, ಕುಮಾರ ಗೌಡರ್ ಹೊಸೂರು ವಂದಿಸಿದರು.
ನಂತರ ಡಾ. ರವಿ ಹೆಗಡೆ ಹೂವಿನಮನೆ ಅವರು ಸದಸ್ಯರಿಗಾಗಿ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು.