ಲಿಂಕ್ ಮಾಡಿಸಲು ಸರ್ವರ್ ಸಮಸ್ಯೆ

online
ಕೊಟ್ಟೂರಿನ ಎಸ್‌ಬಿಐ ಶಾಖಾ ಕಚೇರಿ ಮುಂದೆ ಮಹಿಳೆಯರು ಆಧಾರ್ ಕಾರ್ಡ್‌ಗೆ ಫೋನ್ ನಂಬರ್ ಲಿಂಕ್ ಮಾಡಲು ಕಾದು ಕುಳಿತಿರುವುದು ಮಂಗಳವಾರ ಕಂಡುಬಂತು.
Published on

ಕೊಟ್ಟೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪಟ್ಟಣದ ಖಾಸಗಿ ಕಂಪ್ಯೂಟರ್ ಕೇಂದ್ರಗಳು, ತಹಸಿಲ್ ಕಚೇರಿ, ಅಂಚೆ ಕಚೇರಿಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ.

ತಾಲೂಕಿನ ವಿವಿಧ ಹಳ್ಳಿಗಳಿಂದ ಬಂದ ಮಹಿಳೆಯರು ತಹಸಿಲ್ ಕಚೇರಿ, ಅಂಚೆ ಕಚೇರಿ, ಬ್ಯಾಂಕ್, ಖಾಸಗಿ ಕಂಪ್ಯೂಟರ್ ಕೇಂದ್ರಗಳ ಮುಂದೆ ಬೆಳಗಿನಿಂದಲೇ ಸಾಲುಗಟ್ಟಿ ನಿಲ್ಲಬೇಕಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಗೆ ಆಧಾರ್ ಕಾರ್ಡ್, ಫೋನ್ ನಂಬರ್ ಲಿಂಕ್ ಮಾಡಲು, ಗೃಹ ಜ್ಯೋತಿಗೆ ಕರೆಂಟ್ ಬಿಲ್‌ನೊಂದಿಗೆ ಆಧಾರ್ ಕಾರ್ಡ್ ಹಿಡಿದು ಅರ್ಜಿ ಹಾಕಲು ಮುಗಿಬೀಳುತ್ತಿದ್ದಾರೆ.

ಗೃಹ ಜ್ಯೋತಿ ಯೋಜನೆ ಅರ್ಜಿ ತುಂಬುಲು ಸರ್ವರ್ ತೊಂದರೆಯಾದ ಕಾರಣ ಮಹಿಳೆಯರು ಹಿಡಿಶಾಪ ಹಾಕಿದರು. ಏಕಕಾಲದಲ್ಲಿ ಇಡೀ ರಾಜ್ಯದಲ್ಲಿಯೇ ಗೃಹ ಜ್ಯೋತಿ ಯೋಜನಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕುತ್ತಿರುವುದರಿಂದ ಸತತವಾಗಿ ಸರ್ವರ್ ಬಿಜಿ ಬರುತ್ತಿದೆ ಎಂದು ಆನ್‌ಲೈನ್ ಕೇಂದ್ರದ ನೌಕರರೊಬ್ಬರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net