ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ

Note book distribution
Published on

ಲಿಂಗಸುಗೂರು: ತಾಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಂಗಳೂರಿನ ಸುಂದರ ಭಾರತ ಪ್ರತಿಷ್ಠಾನದಿಂದ ಶುಕ್ರವಾರ ನೋಟ್‌ಬುಕ್ ವಿತರಿಸಲಾಯಿತು.

ಪ್ರತಿಷ್ಠಾನ ಸಂಸ್ಥಾಪಕ ಪ್ರತಾಪ ಪರಾಶರ್ ಮಾತನಾಡಿ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ರಾಜ್ಯದ ನಾನಾ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್‌ಗಳು ಮತ್ತು ಗ್ರಂಥಾಲಯಗಳ ಪುನಶ್ಚೇತನಕ್ಕಾಗಿ ಉಚಿತ ಪುಸ್ತಕ ಹಾಗೂ ನೀರು ಸೇವನೆಗೆ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್‌ಗಳು ಸೇರಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ನಿಸ್ವಾರ್ಥ ಸೇವಾ ಮನೋಭಾವದಿಂದ ಒದಗಿಸುತ್ತ ಬರುತ್ತಿದ್ದು, ಅದರಂತೆ ಬೆಂಡೋಣಿ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ 30 ಸಾವಿರ ಮೊತ್ತದ ಒಂದು ಸಾವಿರ ನೋಟ್‌ಬುಕ್‌ಗಳನ್ನು ವಿತಸಿರುವುದಾಗಿ ತಿಳಿಸಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಮುಕ್ತುಂಸಾಬ್, ಎಸ್‌ಡಿಎಂಸಿ ಅಧ್ಯಕ್ಷ ವಿಠಲ ಕಪನೂರು, ಮುಖ್ಯಗುರು ಅಶೋಕ, ಶಿಕ್ಷಕರಾದ ಚಂದ್ರು, ಸುನೀತಾ, ವಿಜಯಶಾಂತಿ, ಅಮರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net