ಲಿಂಗಸುಗೂರಿನಲ್ಲಿ ಮನೆಗಳ್ಳನ ಬಂಧನ

roberry
Published on

ಲಿಂಗಸುಗೂರು: ಪಟ್ಟಣ ಠಾಣೆ ಪೊಲೀಸರು ಮನೆಗಳ್ಳನನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ನಾಲತ್ವಾಡದ ನಿವಾಸಿ ಸಿಕಂದರ್ ಮೇಲಿನಮನಿ ಬಂಧಿತ. ಈತನಿಂದ 3.10 ಲಕ್ಷ ರೂ. ಮೌಲ್ಯದ 67 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಪಟ್ಟಣ ಠಾಣೆ ವ್ಯಾಪ್ತಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಎಂದು ಪಿಐ ಪುಂಡಲೀಕ ಪಟಾತರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net