

ಲಿಂಗಸುಗೂರು: ಜಲಮಾಲಿನ್ಯ ಕಾಯ್ದೆ ಪ್ರಕಾರ ಪಿಒಪಿ ಮತ್ತು ಬಣ್ಣದ ವಿಗ್ರಹಗಳ ತಯಾರಿಕೆ, ಮಾರಾಟ ಮತ್ತು ವಿಸರ್ಜನೆ ನಿಷೇಧ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪರಿಸರಪ್ರೇಮಿ ಗಣಪ, ಪಿಒಪಿ ಬೇಡಪ್ಪ!
ಕೆರೆ, ಹೊಂಡ, ನದಿಗಳು ಕಲುಷಿತಗೊಳ್ಳುವ ಕಾರಣ ವಿಷಪೂರಿತ ರಾಸಾಯನಿಕಗಳು ನೀರಿಗೆ ಸೇರಿ ಪ್ರಾಣಿ ಪಕ್ಷಿಗಳಿಗೆ ಜೀವ ಹಾನಿಯಾಗುವ ಸಂಭವವಿರುವುದರಿಂದ ಪ್ಲಾಸ್ಟರ್ ಆಫ್ ಪ್ಯಾರೀಸ್ ವಿಗ್ರಹಗಳ ತಯಾರಿಕೆ ಮಾರಾಟ ವಿಸರ್ಜನೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ತಯಾರಿಕೆ, ಮಾರಾಟ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪಿಒಪಿ ಗಣೇಶ ಮೂರ್ತಿ ತಯಾರಕರಿಗೆ ದಂಡ : ಪಟ್ಟಣದಲ್ಲಿ ಪಿಒಪಿ ಗಣೇಶ ಮೂರ್ತಿ ತಯಾರಕ ಘಟಕ ಮೇಲೆ ದಾಳಿ ಮಾಡಿ 30 ಸಾವಿರ ದಂಡ ವಿಧಿಸಲಾಗಿದೆ ಎಂದು ಪುರಸಭೆ ಪರಿಸರ ಅಧಿಕಾರಿ ಗಿರಿಜಾ ತಿಳಿಸಿದ್ದಾರೆ.