

> ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಗೌರಿ&ಗಣೇಶ ಹಬ್ಬ ಹತ್ತಿರವಾಗುತ್ತಿದ್ದಂತೆ ಎಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ರಾಜಧಾನಿಯ ಮುಖ್ಯ ಬೀದಿಗಳಲ್ಲಿ ನಾನಾ ರೂಪದ ಗಣಪತಿ ಮೂರ್ತಿಗಳು ಜನರನ್ನು ಸೆಳೆಯುತ್ತಿವೆ. ಮೂರ್ತಿಗಳ ಮಾರಾಟ ಭರಾಟೆ ಜೋರಾಗಿದ್ದು, ಮಳಿಗೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಎರಡು ವರ್ಷಗಳ ಹಿಂದೆಯೇ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ಬಣ್ಣ ಲೇಪಿತ ಗೌರಿ ಮತ್ತು ಗಣೇಶ ಮೂರ್ತಿಗಳಿಗೆ ನಿಷೇಧ ಹೇರಲಾಗಿದೆ. ಆದರೂ, ಕದ್ದುಮುಚ್ಚಿ ವಿಗ್ರಹಗಳ ನಿರ್ಮಾಣ ಹಾಗೂ ಮಾರಾಟ ನಡೆಯುತ್ತಿದೆ. ಪರಿಸರಸ್ನೇಹಿ ಗಣಪನಿಗೆ ಡಿಮ್ಯಾಂಡ್ ಹೆಚ್ಚಿದ್ದರೂ, ಹಬ್ಬದ ಪರ್ವಕಾಲದಲ್ಲಿ ವ್ಯಾಪಕ ಬೇಡಿಕೆ ಇರುವುದರಿಂದಲೇ ಪರಿಸರಕ್ಕೆ ಹಾನಿಕಾರಕ ಮೂರ್ತಿಗಳ ನಿರ್ಮಾಣಕ್ಕೆ ಸಂಪೂರ್ಣ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದ ಪಿಒಪಿ ಮೂರ್ತಿಗಳು ಸರಬರಾಜಾಗುತ್ತಿದ್ದು, ಲೋಡ್ಗಟ್ಟಲೆ ಮೂರ್ತಿಗಳು ಪ್ರಮುಖ ನಗರಗಳನ್ನು ಕೇಂದ್ರಿಕರಿಸಿ ಮಾರುಕಟ್ಟೆ ಸೃಷ್ಟಿಸಿದ್ದು ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರೂ ಗೌಪ್ಯವಾಗಿಯೇ ಬುಕ್ಕಿಂಗ್ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದಾರೆ.
ಕಠಿಣ ಕ್ರಮ ಮುಂದುವರಿಕೆ: ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸುವ ಸಂಬಂಧ 2023ರ ಸೆ.15ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಬಾರಿಯೂ ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣಾ ಮಂಡಳಿ(ಕೆಎಸ್ಪಿಸಿಬಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಹಿಂದಿನ ಆದೇಶವನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಬೇಕು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. ಪಿಒಪಿ ಗಣೇಶ ವಿಗ್ರಹಗಳಲ್ಲಿ ಸಲ್ಫೇಟ್, ಹೆಮಿಹೈಡ್ರೇಟ್ ಹಾಗೂ ಕ್ಯಾಲ್ಶಿಯಂಯುಕ್ತ ಪುಡಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನೀಷಿಯಂ ಸೇರಿ ಅನೇಕ ಅಪಾಯಕಾರಿ ಅಂಶಗಳಿದ್ದು, ಈ ರೀತಿ ನಿರ್ಮಾಣವಾಗುವ ಮೂರ್ತಿಗಳಿಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸಲಾಗುತ್ತದೆ. ಇದನ್ನು ಜಲ ಮೂಲಗಳಿಗೆ ವಿಸರ್ಜನೆ ಮಾಡುವುದರಿಂದ ಜನರಿಗೂ ಪ್ರಾಣಿಗಳಿಗೂ ಆರೋಗ್ಯದ ಸಮಸ್ಯೆ ಕಟ್ಟಿಟ್ಟಬುತ್ತಿ. ಜಲಚರಗಳ ಮಾರಣಹೋಮಕ್ಕೂ ಕಾರಣವಾಗಬಹುದು ಎಂದು ತಿಳಿಸಿದೆ.
ರಾಜ್ಯದಲ್ಲಿ ಕದ್ದುಮುಚ್ಚಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣಲೇಪಿತ ಗೌರಿ ಮತ್ತು ಗಣೇಶ ವಿಗ್ರಹಗಳ ನಿರ್ಮಾಣ ಹಾಗೂ ಮಾರಾಟ ನಡೆಯುತ್ತಿರುವುದು ಕೆಎಸ್ಪಿಸಿಬಿ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. > ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಗ್ರಾಹಕರ ಗಮನಕ್ಕೆ... * ಪರಿಸರವನ್ನು, ವಿಶೇಷವಾಗಿ ಜಲಮೂಲಗಳನ್ನು ರಕ್ಷಿಸುವ ಉದ್ದೇಶದಿಂದ ಕೆಎಸ್ಪಿಸಿಬಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ, ಸಾಗಣೆ, ಸ್ಥಾಪನೆ ಮತ್ತು ಮುಳುಗಿಸುವುದನ್ನು ನಿಷೇಧಿಸಲಾಗಿದೆ. * ಪರ್ಯಾಯವಾಗಿ ಜೇಡಿಮಣ್ಣಿನ ಮೂರ್ತಿಗಳು, ಜೈವಿಕ ವಿಘಟನೀಯ ಮತ್ತು ಹಾನಿಕಾರಕವಲ್ಲದ ಪದಾರ್ಥಗಳಿಂದ ನಿರ್ಮಿಸಲಾದ (ಉದಾ&ಪೇಪರ್ ಗಣಪ) ಮೂರ್ತಿ ಬಳಸಬಹುದು.
ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಮಾಡುವ ನಿಟ್ಟಿನಲ್ಲಿ "ಸೀಡ್ ಗಣೇಶ' ಅಭಿಯಾನವನ್ನು ಕಳೆದ 7 ವರ್ಷದಿಂದ ಮಾಡುತ್ತಾ ಬಂದಿದ್ದೇವೆ. ಸುಮಾರು 10 ಸಾವಿರಕ್ಕೂ ಅಧಿಕ ಮಕ್ಕಳು ತಮ್ಮ ಕೈಯಾರೆ, ಮನಸೋ ಇಚ್ಛೆ ಮಣ್ಣಿನಲ್ಲಿ ಗಣಪನ ಮೂರ್ತಿ ನಿರ್ಮಿಸಿ, ಅದರ ಜತೆ ಉತ್ತಮ ಬೀಜಗಳನ್ನು ಅಳವಡಿಸಿ, ಪೂಜಿಸಿ ವಿಸರ್ಜಿಸುವ ಮೂಲಕ ಪರಿಸರಕ್ಕೆ ಪೂರಕವಾದ ಹಬ್ಬದ ಆಚರಣೆಯಲ್ಲಿ ಕೈಜೋಡಿಸಿದ್ದಾರೆ. ಈ ಮಾದರಿಯಲ್ಲಿ ವಿವಿಧ ಟ್ರಸ್ಟ್ ಹಾಗೂ ಸಂ&ಸಂಸ್ಥೆಗಳ ಮೂಲಕ ಲಾಂತರ ಮಕ್ಕಳಿಗೆ ಪರಿಸರಸ್ನೇಹಿ ಹಬ್ಬ ಆಚರಣೆಗೆ ಅವಕಾಶ ಲಭಿಸಿದೆ. ಇಂತಹ ಉಪಕ್ರಮಗಳಿಗೆ ಉತ್ತೇಜನೆ ಲಭಿಸಬೇಕಿರುವುದು ಅವಶ್ಯ. > ಕೆ.ಎನ್. ವಿನೀತ್ಕುಮಾರ್, ಪರಿಸರ ಪ್ರೇಮಿ
ಗಮನ ಸೆಳೆದ ಶೋಕೇಸ್ ಗಣಪ ಇತ್ತೀಚಿಗೆ ಪರಿಸರಸ್ನೇಹಿ ಗಣೇಶ ಮೂರ್ತಿಗಳ ನಿರ್ಮಾಣ ವ್ಯಾಪಕವಾಗುತ್ತಿದ್ದು, ಜೇಡಿಮಣ್ಣು, ಕೆಂಪು ಮಣ್ಣು, ಸಗಣಿ, ಪೇಪರ್ ಮೂರ್ತಿಗಳು ಎಲ್ಲೆಡೆ ರಾರಾಜಿಸುತ್ತಿದೆ. ಈ ನಡುವೆ, ಇಲ್ಲೊಂದು "ಶೋಕೇಸ್ ಗಣಪ' ಗಮನ ಸೆಳೆದಿದ್ದು ಬರೀ ತೆಂಗಿನ ಚಿಪು$್ಪ ಹಾಗೂ ಎಕೋ ್ರೆಂಡ್ಲಿ ಬಣ್ಣಗಳಿಂದ ಮೂಡಿ ಬಂದ ವಿನೂತನ ಕಲಾಕೃತಿ ಇದಾಗಿದೆ. ಹಬ್ಬದ ಪೂಜಾ ವಿಧಿ&ವಿಧಾನಗಳಿಗೆ ಹೊರತಾಗಿ ಲೋಹದ ಅಥವಾ ಪ್ಲಾಸ್ಟಿಕ್ ಮೂರ್ತಿಗಳನ್ನು ಅಲಂಕಾರಕ್ಕಾಗಿ ಇಡುವವರು ಇಂತಹ ಕಲಾಕೃತಿಗಳತ್ತ ಗಮನಹರಿಸಬಹುದು. ಶೇ.90 ತೆಂಗಿನ ಚಿಪು$್ಪ ಉಪಯೋಗಿಸಿ ನಿರ್ಮಾಣ ಮಾಡಲಾಗಿದ್ದು, ಕಲಾಕೃತಿಗೆ ಅಂದ ಹೆಚ್ಚಿಸುವ ಸಲುವಾಗಿ ಪರಿಸರಸ್ನೇಹಿ ಬಣ್ಣಗಳನ್ನು ಬಳಸಿ ಹವ್ಯಾಸಿ ಕರಕುಶಲ ಕರ್ಮಿ ನಂದಕುಮಾರ್ ಕುಂಬಳೆ ನಿರ್ಮಾಣ ಮಾಡಿದ್ದಾರೆ. ಮರುಬಳಕೆ ಮತ್ತು ನವೀಕೃತ ವಸ್ತುಗಳಿಂದ ಸೃಜನಾತ್ಮಕ ಕಲಾಕೃತಿ ಮತ್ತು ವಸ್ತುಸಂಗ್ರಹಗಳನ್ನು ಮಾಡುವುದು ಇವರ ಹವ್ಯಾಸವಾಗಿದೆ. ಇವರ ಹಲವು ಕಲಾಕೃತಿಗಳಲ್ಲಿ ಈ ವರ್ಷ ವಿಶೇಷ ಗಮನ ಸೆಳೆದಂತಹ ಕೃತಿಯೇ "ಶೋಕೇಸ್ ಗಣಪ'.