ಬಿಸಿಲ ತಾಪಕ್ಕೆ ಬಸವಳಿದ ಜನತೆ

Untitled design
ಲಿಂಗಸುಗೂರು ಪಟ್ಟಣದಲ್ಲಿ ಬೇಸಿಗೆ ಬಿಸಿಲ ದಾಹ ತೀರಿಸಿಕೊಳ್ಳಲು ಕಲ್ಲಂಗಡಿ ಹಣ್ಣು ಸವಿಯುತ್ತಿರುವ ಜನತೆ.
Published on

ಲಿಂಗಸುಗೂರು: ಪ್ರಸಕ್ತ ವರ್ಷದಲ್ಲಿ ಪೆಬ್ರವರಿ ತಿಂಗಳಿನಿಂದಲೇ ಸುಡು ಬಿಸಿಲು ಆರಂಭವಾಗಿದೆ. ಬಿಸಿಲಿನ ತಾಪ ತಾಳದೆ ಜನತೆ ಹಣ್ಣು, ತಂಪು ಪಾನೀಯಗೆ ಮೊರೆ ಹೋಗುತ್ತಿದ್ದಾರೆ.

ರಾಯಚೂರು ಅತಿಹೆಚ್ಚು ದಾಖಲೆ ಬಿಸಿಲಿನ ತಾಪಮಾನಕ್ಕೆ ಹೆಸರುವಾಸಿ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ವರುಣನ ಅವಕೃಪೆಯಿಂದ ತೀವ್ರ ಬರಗಾಲ ಆವರಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಕಲ್ಲಂಗಡಿ, ಕರಬೂಜ್ ಹಣ್ಣುಗಳ ಸೇವನೆ ಹಾಗೂ ಎಳೆನೀರು, ಕಬ್ಬಿನ ಹಾಲು, ವಿವಿಧ ಹಣ್ಣಿನ ಜ್ಯೂಸ್, ಶರಬತ್, ಮಜ್ಜಿಗೆ, ಲಸ್ಸಿ, ಐಸ್‌ಕ್ರೀಮ್ ನಾನಾ ಕಂಪನಿಯ ತಂಪು ಪಾನೀಯಗಳ ಮೊರೆ ಹೋಗುವಂತೆ ಬಿಸಿಲಿನ ತಾಪ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net