

ಲಿಂಗಸುಗೂರು: ಐದನಾಳ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ಕಳಪೆಯಿಂದ ಕೂಡಿದೆ ಆರೋಪಿಸಿ ಕರವೇ ಕಾರ್ಯಕರ್ತರು ಎಸಿ ಕಚೇರಿ ಗ್ರಾಮ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಗುರುವಾರ ಮನವಿ ಸಲ್ಲಿಸಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಐದನಾಳ ಗ್ರಾಮದ ಕೆರೆ ಅಭಿವೃದ್ಧಿಪಡಿಸಲು ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ. ಅಂದಾಜು ಪತ್ರಿಕೆಯಲ್ಲಿದ್ದಂತೆ 1.5 ಮೀಟರ್ ಮಣ್ಣು ಅಗೆದು ಮರಂ ತುಂಬಿ ರೂಲರ್ ಮಾಡಬೇಕೆಂದು ನಿಯಮವಿದೆ. ಆದರೆ, ಗುತ್ತಿಗೆದಾರರು 8-10 ಟ್ರಿಪ್ ಮರಂ ಹಾಕಿ ಬಿಟ್ಟಿದ್ದಾರೆ. ಅಂದಾಜು ಪತ್ರಿಕೆಯಂತೆ ಟಿಎಂಟಿ ಕಂಬಿಗಳನ್ನು ಬಳಸಿ ಕಾಂಕ್ರೀಟ್ ಹಾಕಬೇಕು. ಕಾಲುವೆಗಳನ್ನು ನಿರ್ಮಿಸಿ ಜಮೀನುಗಳಿಗೆ ನೀರು ಹರಿಯುವಂತೆ ಮಾಡಬೇಕು. ಕೆರೆಯ ಮೇಲ್ಭಾಗದಲ್ಲಿ ಹುಲ್ಲು ಬೆಳೆಸಬೇಕು. ಇವೆಲ್ಲ ಕೆಲಸ ಮಾಡದೆ ಅರ್ಧಕ್ಕೆ ಬಿಟ್ಟಿದ್ದಾರೆ. ಆದ್ದರಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು. ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಐದನಾಳನಲ್ಲಿ ಸೌಲಭ್ಯ ಒದಗಿಸಿ
ಕರವೇ ತಾಲೂಕು ಅಧ್ಯಕ್ಷ ಬಿ.ರುದ್ರಯ್ಯ ಸ್ವಾಮಿ, ಚನ್ನಬಸವರಾಜ ಹಾಲಬಾವಿ, ಪ್ರೇಮಗೌಡ ಹಾಲಬಾವಿ, ವೀರೇಶ, ಶಂಕರ್.ಡಿ, ಅಮರೇಶ, ವೀರೇಶ ಐದನಾಳ, ರುದ್ರಪ್ಪ, ರಾಜು ಇದ್ದರು.