ಐದನಾಳನಲ್ಲಿ ಸೌಲಭ್ಯ ಒದಗಿಸಿ

Untitled design (16)
ಲಿಂಗಸುಗೂರು ತಾಪಂ ಎಫ್‌ಡಿಸಿ ಚಾಂದಪಾಷಾಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಜಿಲಾನಿಪಾಷಾ, ಗ್ರಾಮ ಘಟಕ ಅಧ್ಯಕ್ಷ ವೀರೇಶಸ್ವಾಮಿ ಪ್ರಮುಖರಾದ ಮಹಾಂತಮಠ, ಹನುಮೇಶ ನಾಯಕ, ಅಜೀಜ್ ಪಾಷಾ, ಪ್ರಭು ಕಾಳಾಪುರ, ಇಲಿಯಾಸ್, ಬಸವರಾಜ ಯಲಗಲದಿನ್ನಿ, ಹನುಮಂತ ಭಜಂತ್ರಿ, ಮಲ್ಲೇಶ ಪೋಳ್, ಅಮರೇಶ, ಇಮ್ರಾನ್, ರಂಗನಾಥ, ರವಿ ಬರಗುಡಿ ಇದ್ದರು.
Published on

ಲಿಂಗಸುಗೂರು: ಕಾಳಾಪುರ ಗ್ರಾಪಂ ವ್ಯಾಪ್ತಿಯ ಐದನಾಳ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಾಪಂ ಎಫ್‌ಡಿಸಿ ಚಾಂದಪಾಷಾಗೆ ಮಂಗಳವಾರ ಮನವಿ ಸಲ್ಲಿಸಿದರು.

ಮೂಲ ಸೌಕರ್ಯ ಕಲ್ಪಿಸಿ

ಗ್ರಾಮದಲ್ಲಿ ರಸ್ತೆ, ಚರಂಡಿ, ಜಂಗಲ್ ಕಟಿಂಗ್, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ಗ್ರಾಪಂಗೆ ಗ್ರಾಮದಿಂದ ಮೂರು ಜನ ಸದಸ್ಯರು ಆಯ್ಕೆಗೊಂಡಿದ್ದರೂ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಗ್ರಾಪಂ ಪಿಡಿಒ ಗ್ರಾಮದತ್ತ ಸುಳಿಯುತ್ತಿಲ್ಲ. ಚರಂಡಿ ನೀರು ರಸ್ತೆ ಹರಿಯುತ್ತಿದ್ದು, ಕಲುಷಿತ ವಾತಾವರಣ ನಿರ್ಮಾಣಗೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಗ್ರಾಪಂ ಪಿಡಿಒ ಮೇಲೆ ಕ್ರಮ ಕೈಗೊಂಡು ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net