ಗುರುಗುಂಟಾವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಿ

Untitled design(25)
ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಗುರುಗುಂಟಾ ಪಟ್ಟಣ ಪಂಚಾಯಿತಿ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಹೋರಾಟ ಸಮಿತಿಯ ಗೌರವಾಧ್ಯಕ್ಷ ರಾಜಾ ಶ್ರೀನಿವಾಸ ನಾಯಕ, ಅಧ್ಯಕ್ಷ ಅಮರೇಶ ನಾಯಕ ರತ್ನಗಿರಿ, ಉಪಾಧ್ಯಕ್ಷ ಅಬ್ದುಲ್ ವಾಜಿದ್, ಪ್ರಧಾನ ಕಾರ್ಯದರ್ಶಿ ಮಾಣಿಕ ಇಂಗಳ, ಸಂಘಟನಾ ಕಾರ್ಯದರ್ಶಿ ಹನಮಂತ ಅಂಬಿಗೇರ ಇತರರಿದ್ದರು.
Published on

ಲಿಂಗಸುಗೂರು: ಗುರುಗುಂಟಾ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಒತ್ತಾಯಿಸಿ ಗುರುಗುಂಟಾ ಪಟ್ಟಣ ಪಂಚಾಯಿತಿ ಹೋರಾಟ ಸಮಿತಿ ಪಟ್ಟಣದಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿತು.

ಗುರುಗುಂಟಾ ಗ್ರಾಮವು 2011 ರ ಜನಗಣತಿ ಪ್ರಕಾರ 12,898 ಜನಸಂಖ್ಯೆ ಇತ್ತು. ಈಗ ದ್ವಿಗುಣವಾಗಿದ್ದು ಸ್ಥಳೀಯ ಸಂಸ್ಥೆಗಳ ಕಾಯ್ದೆ ಪ್ರಕಾರ 10,000 ದಿಂದ 20,000 ಜನಸಂಖ್ಯೆ ಇದ್ದರೆ ಅದನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಬೇಕು. ಗುರುಗುಂಟಾ ಗ್ರಾಮವು ದಿನದಿಂದ ದಿನಕ್ಕೆ ಜನಸಂಖ್ಯೆ, ವ್ಯಾಪಾರ, ವಾಹನ ಸಂಚಾರ, ಶಿಕ್ಷಣ, ಆರೋಗ್ಯ ಕೇಂದ್ರಗಳು ಹೆಚ್ಚಾಗುತ್ತಿವೆ. ಇವೆಲ್ಲವುಗಳನ್ನು ಪರಿಗಣನೆಗೆ ತೆಗೆದುಕೊಂಡು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ 2025 ಮೇ 22 ರಂದು ಪತ್ರ ಬರೆದು ಗ್ರಾಮ ಪಂಚಾಯತಿ ಸಭೆ ಕರೆದು ಠರಾವು ಪಾಸ್ ಮಾಡುವಂತೆ ಪತ್ರದಲ್ಲಿ ತಿಳಿಸಿದ್ದರು. ಇಲ್ಲಿಯವರೆಗೆ ಯಾವುದೇ ಸಭೆಯನ್ನು ಮಾಡಿಲ್ಲ. ಈ ಕುರಿತು ಕ್ರಮ ಕೈಗೊಳ್ಳಬೇಕು. ಒಂದ ವಾರದ ಒಳಗಡೆ ಸ್ಪಂದನೆ ಸಿಗದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಹೋರಾಟ ಸಮಿತಿಯ ಗೌರವಾಧ್ಯಕ್ಷ ರಾಜಾ ಶ್ರೀನಿವಾಸ ನಾಯಕ, ಅಧ್ಯಕ್ಷ ಅಮರೇಶ ನಾಯಕ ರತ್ನಗಿರಿ, ಉಪಾಧ್ಯಕ್ಷ ಅಬ್ದುಲ್ ವಾಜಿದ್, ಪ್ರಧಾನ ಕಾರ್ಯದರ್ಶಿ ಮಾಣಿಕ ಇಂಗಳ, ಸಂಘಟನಾ ಕಾರ್ಯದರ್ಶಿ ಹನಮಂತ ಅಂಬಿಗೇರ, ಖಜಾಂಚಿ ಅಮರೇಶ ನಾಯಕ ಪೂಜಾರಿ, ಪ್ರಮುಖರಾದ ಅಮೀರ ಅಲಿ, ಗಂಗಪ್ಪ ಕಬ್ಬೇರ, ಅಮರೇಶ ನಾಯಕ ನೀರಿನ, ಸಂತೋಷ ನಾಯಕ, ಶಿವಪ್ಪ ನಾಯಕ, ಲಚಮಣ್ಣ ನಾಯಕ, ಮಹ್ಮದ ಹುಸೇನ, ರಹಿಮತುಲ್ಲಾ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net