

ಕೊಳ್ಳೇಗಾಲ: ಪಟ್ಟಣದ ಎಂಜಿಎಸ್‌ವಿ ಮೈದಾನದಲ್ಲಿ ತೆರೆದಿರುವ ಪಟಾಕಿ ಮಾರಾಟ ಮಳಿಗೆಗಳಿಗೆ ಸೋಮವಾರ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಭೇಟಿ ನೀಡಿದರು.
ನಾಡಿನಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಪಟ್ಟಣದ ಎಂಜಿಎಸ್‌ವಿ ಮೈದಾನದಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲಾಗಿದ್ದು ಸಾರ್ವಜನಿಕರು ಪಟಾಕಿಗಳನ್ನು ಖರೀದಿ ಮಾಡುತ್ತಿದ್ದಾರೆ. ಪರಿಸರ ಕಾಳಜಿಯ ದೃಷ್ಟಿಯಿಂದ ಎಲ್ಲರೂ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನೇ ಮಾರಾಟ ಮಾಡಬೇಕು. ಮಕ್ಕಳು ಸುರಕ್ಷಿತ ರೀತಿಯಲ್ಲಿ ಪಾಲಕರ ಮಾರ್ಗ ದರ್ಶನದಂತೆ ಪಟಾಕಿಗಳನ್ನು ಹಚ್ಚಬೇಕು. ಈ ಬೆಳಿಕಿನ ಹಬ್ಬ ಎಲ್ಲರ ಬದುಕಿನಲ್ಲೂ ಬೆಳಕನ್ನು ತರಲಿ ಎಂದು ಹಾರೈಸಿದರು.
ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದಪ್ಪಾಜಿ, ಮುಖಂಡರಾದ ಜಾಕಿ ಸುರೇಶ್, ಸೋಮಣ್ಣ ಉಪ್ಪಾರ್, ವಿಜಯ್ ಕುಮಾರ್, ಮಧುಚಂದ್ರ, ತೇಜು, ದಿಲೀಪ್ ಸಿದ್ದಪ್ಪಾಜಿ, ವರದರಾಜು, ಗುರು ಮೂರ್ತಿ, ರಾಜಶೇಖರ್ ಮೂರ್ತಿ, ಸನತ್ ಕುಮಾರ್ ಮತ್ತಿತರಿದ್ದರು.