ನಿನ್ನನ್ನು ನಾಲ್ಕೈದು ದಿನಗಳಲ್ಲಿ ಕೊಚ್ಚಿ ಹಾಕ್ತೇವೆ: ಶಾಸಕ ರೇಣುಕಾಚಾರ್ಯಗೆ ಜೀವ ಬೆದರಿಕೆ

Renukacharya vvani
Published on

ದಾವಣಗೆರೆ: ಅನಾಮಧೇಯ ವ್ಯಕ್ತಿಯೊಬ್ಬ ಬಿಜೆಪಿ ನಾಯಕರಾದ ಸಿ.ಟಿ.ರವಿ, ಬಸನಗೌಡ ಯತ್ನಾಳ್, ರೇಣುಕಾಚಾರ್ಯ ಅವರ ಕುರಿತು ಅವಾಚ್ಯವಾಗಿ ಮಾತನಾಡಿದ್ದಾನೆ. ಅಲ್ಲದೆ, ಶಾಸಕ ರೇಣುಕಾಚಾರ್ಯ ಮತ್ತು ಅವರ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಕುರಿತು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಬೆಳಗ್ಗೆ 10ರಿಂದ ಅನಾಮಧೇಯ ವ್ಯಕ್ತಿಯೊಬ್ಬ ಅಪರಿಚಿತ ಮೊಬೈಲ್​ಫೋನ್ ಸಂಖ್ಯೆಯಿಂದ ಪದೇಪದೆ ಕರೆ ಮಾಡಿದ್ದಲ್ಲದೆ ಪ್ರಾಣ ಬೆದರಿಕೆಯನ್ನು ಹಾಕಿದ್ದಾನೆ. ಹಿಜಾಬ್, ಹಲಾಲ್, ಮದರಸಾಗಳ ಸುದ್ದಿ ಮಾತನಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಆ ವ್ಯಕ್ತಿ, ಅವುಗಳ ಕುರಿತು ಮಾತನಾಡಬಾರದು ಎಂದು ಬೆದರಿಕೆಯೊಡ್ಡಿದ್ದಾನೆ.

ನಿನ್ನನ್ನು ನಾಲ್ಕೈದು ದಿನಗಳಲ್ಲಿ ಕೊಚ್ಚಿ ಹಾಕುವೆ, ನಿನ್ನನ್ನೂ ನಿನ್ನ ಮಗನನ್ನೂ ತೆಗೆಯುತ್ತೇವೆ ಎಂದೆಲ್ಲ ಆ ವ್ಯಕ್ತಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಒಡ್ಡಿದವನ ಮಾತಿನ ಶೈಲಿ ಕರಾವಳಿ ಕಡೆಯವರ ಥರ ಇದ್ದು, ಆತನನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಬೇಕು ಎಂದು ರೇಣುಕಾಚಾರ್ಯ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net