More

    ಆನ್​​ಲೈನ್​ನಲ್ಲಿ ವೈನ್ ಆರ್ಡರ್ ಮಾಡಿದ ಯುವತಿ; ಡೆಲಿವರಿ ಕೊಡಲು ಬರುತ್ತಿದ್ದೇನೆ ಎಂದವ ಮಾಡಿದ್ದೇನು?

    ಬೆಂಗಳೂರು: ಆನ್‌ಲೈನ್‌ನಲ್ಲಿ ವೈನ್ ಆರ್ಡರ್ ಮಾಡಿದ್ದ 22 ವರ್ಷದ ಯುವತಿ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರು 50 ಸಾವಿರ ರೂ. ಕನ್ನ ಹಾಕಿದ್ದಾರೆ.
    ಲಾಲ್‌ಬಾಗ್ ರಸ್ತೆ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ 22 ವರ್ಷದ ಯುವತಿ ವಂಚನೆಗೆ ಒಳಗಾಗಿದ್ದು, ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಎಫ್​​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಯುವತಿ ಮಾರ್ಚ್ 22ರಂದು ವೈನ್ ಹೋಂ ಡೆಲಿವರಿ ವೆಬ್‌ಸೈಟ್‌ನಲ್ಲಿ ವೈನ್ ಬುಕ್ ಮಾಡಿ 540 ರೂ. ಪಾವತಿ ಮಾಡಿದ್ದಾರೆ. ಸ್ವಲ್ಪ ಹೊತ್ತಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ವೈನ್ ಡೆಲಿವರಿ ಕೊಡಲು ಬರುತ್ತಿದ್ದೇನೆ. ಅದಕ್ಕೂ ಮೊದಲು ಡೆಲಿವರಿ ಶುಲ್ಕವೆಂದು 10 ರೂ. ಪಾವತಿ ಮಾಡುವಂತೆ ಸೂಚಿಸಿದ್ದಾನೆ. ಯುವತಿ ಒಪ್ಪಿಕೊಂಡಾಗ ನಿಮ್ಮ ಮೊಬೈಲ್‌ಫೋನ್​ಗೆ ಬರುವ ಒಟಿಪಿ ನಂಬರ್ ಹೇಳಿದರೆ ಸಾಕು ಎಂದು ಒಟಿಪಿ ಪಡೆದು ಯುವತಿಯ ಬ್ಯಾಂಕ್ ಖಾತೆಯಿಂದ 49,326 ರೂ. ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

    ಕರೆ ಕಟ್ ಆದ ಮೇಲೆ ಮೊಬೈಲ್‌ ಫೋನ್​ಗೆ ಬಂದ ಬ್ಯಾಂಕ್ ಸಂದೇಶದಲ್ಲಿ ಹಣ ಕಡಿತವಾಗಿರುವುದು ಕಂಡು ಯುವತಿ ಗಾಬರಿಗೊಂಡು ಕೊನೆಗೆ ದಿಕ್ಕು ತೋಚದೆ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯುವತಿ ಮೇಲೆ ಗ್ಯಾಂಗ್ ರೇಪ್​; ರಾಷ್ಟ್ರಮಟ್ಟದ ನಾಲ್ವರು ಈಜುಪಟುಗಳ ಬಂಧನ..

    ಪ್ರಧಾನಿ ಮೋದಿಯ ಫೋಟೋ ಇಟ್ಟರೆ ನಿನ್ನನ್ನೇ ಮನೆಯಿಂದ ಹೊರಹಾಕುವೆ ಎಂದ ಮಾಲೀಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts