ಮಕ್ಕಳಿಗೆ ಜೀವನ ಪದ್ಧತಿ ಅರಿವು: ದುಗ್ಗಪ್ಪ ನಾಯ್ಕ ಆಶಯ

Ism_Marati-sanga
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಮಕ್ಕಳು ಅಂಕ ಗಳಿಸುವುದೊಂದೇ ಶಿಕ್ಷಣದ ಮಾನದಂಡವಲ್ಲ. ಶಿಕ್ಷಣದ ಜತೆಗೆ ಜೀವನ ಪದ್ಧತಿಯ ಅರಿವು ಮೂಡಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸವನ್ನು ಗ್ರಾಮೀಣ ಸಂಘಟನೆಗಳು ಮಾಡಬೇಕು ಎಂದು ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ದುಗ್ಗಪ್ಪ ನಾಯ್ಕ ಹೇಳಿದರು.

ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಪಡುಮಲೆ ಶಾಖೆ ವತಿಯಿಂದ ಬಡಗನ್ನೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆ, ಆಟಿ ಐಸಿರಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡಿನ ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿ ಬುದ್ದ ನಾಯ್ಕ ಮುಂಡೋಳೆ, ಮಾತೃ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್ ಎಲ್.ಎನ್., ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ವೈ.ಕೆ. ನಾಯ್ಕ ಪಟ್ಟೆ, ಕೊಂಬೆಟ್ಟು ಮರಾಟಿ ಯುವ ವೇದಿಕೆ ಅಧ್ಯಕ್ಷ ಗಂಗಾಧರ ನಾಯ್ಕ ಕೌಡಿಚ್ಚಾರು, ಮಾತೃ ಸಂಘದ ಕಾರ್ಯದರ್ಶಿ ಶೀನಪ್ಪ ನಾಯ್ಕ, ಮಾತೃ ಸಂಘದ ಕೋಶಾಧಿಕಾರಿ ಮೋಹನ್, ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಶ್ರೀಧರ ನಾಯ್ಕ ನೇರ್ಲಪ್ಪಾಡಿ, ಜಿ.ಪಂ.ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ, ಮಹಿಳಾ ಸಂಘದ ಅಧ್ಯಕ್ಷೆ ಕಿಶೋರಿ ದುಗ್ಗಪ್ಪ ನಾಯ್ಕ, ಮಹಾಲಿಂಗ ನಾಯ್ಕ, ಕರುಣಾಕರ ನಾಯ್ಕ ಅಲೆಟ್ಟಿ, ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಸೀತಾರಾಮ ನಾಯ್ಕ, ಮಾತೃ ಸಂಘದ ಕಾರ್ಯಕಾರಿ ಸದಸ್ಯ ಬಾಬು ನಾಯ್ಕ, ಯುವ ವೇದಿಕೆಯ ಗೋಪಾಲ ನಾಯ್ಕ, ರಾಮಚಂದ್ರ ನಾಯ್ಕ ಪೇರಾಲು ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ಜಯಂತಿ ಮೂಂಡೋಳೆ ವರದಿ ವಾಚಿಸಿದರು, ಕುಸುಮಾವತಿ ತಲೆಂಜಿ ಬಹುಮಾನ ವಿಜೇತ ಪಟ್ಟಿ ಓದಿದರು. ಬಡಗನ್ನೂರು ಶಾಲಾ ವಿದ್ಯಾರ್ಥಿ ಲಾಸ್ಯ ಪ್ರಾರ್ಥಿಸಿದರು.ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಪೇರಾಲು ಸ್ವಾಗತಿಸಿ, ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ನೀಲಗಿರಿ ವಂದಿಸಿದರು ಮಾಜಿ. ತಾ.ಪಂ ಮಾಜಿ ಅಧ್ಯಕ್ಷೆ ರೇಖಾ ನಾಗರಾಜ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net