

ಪುತ್ತೂರು: ಮಾಣಿ - ಮೈಸೂರು ಹೆದ್ದಾರಿಯ ನೆಹರು ನಗರದಲ್ಲಿರುವ ಲಾಡ್ಜ್ ಒಂದಕ್ಕೆ ನಗರ ಠಾಣೆ ಎಸ್. ಐ. ಆಂಜನೇಯ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಸೋಮವಾರ ರಾತ್ರಿ ಲಾಡ್ಜ್ ಮುಂದೆ ಅನುಮಾನಾಸ್ಪದ ರೀತಿಯಲ್ಲಿ ಇನ್ನೋವಾ ಕಾರೊಂದು ಬಾಕಿಯಾಗಿದ್ದು, ಅದರಲ್ಲಿದ್ದವರು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದೇ ದಾಳಿಗೆ ಕಾರಣ ಎನ್ನಲಾಗಿದೆ.
ಕೆಲವು ಮೂಲಗಳ ಪ್ರಕಾರ ದಾಖಲೆಯನ್ನು ಪಡೆದುಕೊಳ್ಳದೆ, ಕಾಲೇಜು ವಿದ್ಯಾರ್ಥಿಗಳ ಅಕ್ರಮ ಚಟುವಟಿಕೆಗೆ ರೂಮ್ ನೀಡಲಾಗುತ್ತಿದ್ದ ಆರೋಪ ಎಂದು ಹೇಳಲಾಗುತ್ತಿದೆ. ಇನ್ನು ಕೆಲವು ಮೂಲಗಳ ಪ್ರಕಾರ ದಾಖಲೆ ಇಲ್ಲದ ಆಗಂತುಕರು ಲಾಡ್ಜ್ ಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ವಾತಂತ್ರ್ಯ ದಿನಾಚರಣೆ ಎರಡನೇ ದಿನದಲ್ಲಿ ಇರುವ ಕಾರಣದಿಂದ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅನಿವಾರ್ಯತೆ ಇದೆ. ದಾಳಿಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲಿಸುವುದಾಗಿ ಮಾಹಿತಿ ನೀಡಿದ್ದಾರೆ.