ಬದುಕಿಗೆ ಕೌಶಲ ತರಬೇತಿ ಅವಶ್ಯ

life skills training essential
ಬನಹಟ್ಟಿ ಭವಾನಿ ಮಂದಿರದಲ್ಲಿ ನಡೆದ ಮಹಿಳೆಯರ ಉಚಿತ ಹೊಲಿಗೆ ತರಬೇತಿ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಗುರುಪಾದಯ್ಯ ಹಿರೇಮಠ ಮಾತನಾಡಿದರು. ಭಾರತಿ ಬಿದರಿ, ಸಿದ್ದವ್ವ ಗಾಯಕವಾಡ ಇದ್ದರು.
Published on

ರಬಕವಿ/ಬನಹಟ್ಟಿ: ಸ್ವಾವಲಂಬಿ ಬದುಕು ಸಾಗಿಸಲು ವೃತ್ತಿ ಕೌಶಲ ತರಬೇತಿ ಅವಶ್ಯವಾಗಿದೆ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹಿರೇಮಠ ಅಭಿಪ್ರಾಯಪಟ್ಟರು.

ಬನಹಟ್ಟಿಯ ಭವಾನಿ ಮಂದಿರದಲ್ಲಿ ಕಾಮಧೇನು ಮಹಿಳಾ ಉಳಿತಾಯ ಗುಂಪಿನಿಂದ ಗುರುವಾರ ಹಮ್ಮಿಕೊಂಡಿದ್ದ ಕೌಶಲ ಅಭಿವೃದ್ಧಿ ತರಬೇತಿ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಟೈಲರಿಂಗ್ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ತರಬೇತಿ ಪೂರೈಸಿರುವ ಮಹಿಳೆಯರು ಜಾಣ್ಮೆಯಿಂದ ಕೌಶಲ ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಎಲ್ಲ ವರ್ಗದ ಮಹಿಳೆಯರು ಹೊರಗೆ ಬಂದು ತರಬೇತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಮಹಾವೀರ ಬಿಲವಡಿ ಮಾತನಾಡಿ, ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳು ಜಾರಿಗೆ ಬರುತ್ತಿದ್ದು, ಅವುಗಳನ್ನು ಸಮರ್ಪಕಗಾಗಿ ಬಳಸಿಕೊಳ್ಳಬೇಕು ಎಂದರು.

ಮಹಿಳೆಯರಾದ ಭಾರತಿ ಬಿದರಿ, ಸಿದ್ದವ್ವ ಗಾಯಕವಾಡ, ಸಾವಿತ್ರಿ ಮದನಮಟ್ಟಿ ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net