ಉತ್ತಮ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ

kridakoot
ಕೆರೂರದಲ್ಲಿ ಹಮ್ಮಿಕೊಂಡಿದ್ದ ವಲಯಮಟ್ಟದ ಕ್ರೀಡಾಕೂಟಕ್ಕೆ ತಾಲೂಕು ದೈಹಿಕ ಪರಿವೀಕ್ಷಕಿ ಬಿ.ವೈ. ಕಂದಗನೂರ ಚಾಲನೆ ನೀಡಿದರು. ಶಿಕ್ಷಕರಾದ ಆರ್.ಬಿ. ಬಿಲ್ಲಾರ, ವಿಜಯಕುಮಾರ ಹಿರೇಮಠ, ಎಚ್.ಸಿ. ಚಿಕ್ಕೂರ, ಬಿ. ಜಿ. ಹಕಾರಿ ಇತರರಿದ್ದರು.
Published on

ಕೆರೂರ: ಕ್ರೀಡೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕೆಂದು ತಾಲೂಕು ದೈಹಿಕ ಪರಿವೀಕ್ಷಕಿ ಬಿ.ವೈ. ಕಂದಗನೂರ ಹೇಳಿದರು.

ಪಟ್ಟಣದ ಎ.ಆರ್. ಹಿರೇಮಠ ಮಾಧ್ಯಮಿಕ ಶಾಲೆ ಆವರಣದಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ನಡೆದ ಕೆರೂರ ವಲಯಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ರಾಚೋಟೇಶ್ವರ ಕುದರಿ ಮಾತನಾಡಿ, ವಿದ್ಯಾರ್ಥಿಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಜತೆಗೆ ಶೈಕ್ಷಣಿಕ ಕಲಿಕೆ ಕಡೆಗೂ ಗಮನಹರಿಸಬೇಕು ಎಂದರು.

ಒಟ್ಟು 45 ಶಾಲೆಗಳ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೆ. ವೈ. ಕಿಳ್ಳಿಕೆತರ ಸಾನ್ನಿಧ್ಯ ವಹಿಸಿದ್ದರು.

ಸಿ. ಎಸ್. ನಾಗನೂರ ಅಧ್ಯಕ್ಷತೆ ವಹಿಸಿದ್ದರು. ಜೆ. ಎಸ್. ಬಾರಕೇರ, ತಾಲೂಕು ದೈಹಿಕ ಪರಿವೀಕ್ಷಕಿ ಬಿ.ವೈ. ಕಂದಗನೂರ, ಶಿಕ್ಷಕರಾದ ಆರ್.ಬಿ. ಬಿಲ್ಲಾರ, ವಿಜಯಕುಮಾರ ಹಿರೇಮಠ, ಎಚ್. ಸಿ. ಚಿಕ್ಕೂರ, ಬಿ. ಜಿ. ಹಕಾರಿ, ಜಿ. ಡಿ. ಹಂಜಿ, ವಿ. ಜಿ. ಪರದೇಶಿ, ಎಸ್. ಎಚ್. ದಡಿ, ಎಂ. ಎಸ್. ನರಬೆಂಚಿ, ಎಚ್. ಬಿ. ಗುನ್ನಣ್ಣವರ, ಆರ್. ವಿ. ಗೌಡಪ್ಪಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net