ಜೀವನ ಕೌಶಲ ಅಭಿವೃದ್ಧಿ ಶಿಬಿರ

up school
Published on

ಬದಿಯಡ್ಕ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾಸರಗೋಡು ಜಿಲ್ಲಾ ಮಟ್ಟದ ಮಕ್ಕಳ ಕುರಿತು ನಮ್ಮ ಜವಾಬ್ದಾರಿ ಯೋಜನೆಯ ಆಶ್ರಯದಲ್ಲಿ ಗುರುವಾರ ಮವ್ವಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೀವನ ಕೌಶಲ ಅಭಿವೃದ್ಧಿ ಶಿಬಿರ ಜರುಗಿತು.

ಒಆರ್‌ಸಿ ತರಬೇತುದಾರ ನಿರ್ಮಲ್ ಕುಮಾರ್ ಮಾಹಿತಿ ನೀಡಿದರು. ಜಿಲ್ಲಾ ಸಂಯೋಜಕಿ ರಮ್ಯಶ್ರೀ ಹಾಗೂ ಕೌನ್ಸಿಲರ್ ಅಮೃತ ಶಿಬಿರದ ನೇತೃತ್ವ ವಹಿಸಿದ್ದರು. ಆಸಕ್ತಿದಾಯಕ ಆಟಗಳ ಮೂಲಕ ಮಕ್ಕಳಲ್ಲಿ ವಿವಿಧ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಗುರುತಿಸುವುದು ತಿಳಿಸಲಾಯಿತು. ಪಿಟಿಎ ಅಧ್ಯಕ್ಷ ವಿಶ್ವನಾಥ ಬಳ್ಳಪದವು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಶೀಜಾ, ಎಂಪಿಟಿಎ ಬೀಫಾತಿಮಾ, ಶಿಕ್ಷಕ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net