ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

Published on

ಕನಕಪುರ: ಮೋಟಾರ್​ ಬೈಕ್​ ಮಾರಿದ ಹಣವನ್ನು ನೀಡುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನ್ನು ಕೊಲೆ ಮಾಡಿದ್ದ ಮೂವರಿಗೆ ಕನಕಪುರ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ.

ಮರಳವಾಡಿ ಹೋಬಳಿ ದೊಡ್ಡೂರು ಗ್ರಾಮದ ಪುನೀತ (28), ಹನುಮಂತನದೊಡ್ಡಿ ನಾಗರಾಜ್​ ನಾಯ್ಕ(31), ಚಿಕ್ಕಮರಳವಾಡಿ ವಿವೇಕ್​ (31) ಅವರನ್ನು ತಪ್ಪಿತಸ್ಥರೆಂದು ೂಷಿಸಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಎಚ್​.ಎನ್​.ಕುಮಾರ್​ ಶಿೆ ಪ್ರಕಟಿಸಿದ್ದಾರೆ.

ಟನೆ ವಿವರ

ಹಾರೋಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯ ದುರ್ಗೇಗೌಡನದೊಡ್ಡಿ ರಂಜಿತ್​(23) ಎಂಬಾತನ ಮೋಟಾರ್​ಬೈಕನ್ನು ದೊಡ್ಡೂರು ಗ್ರಾಮದ ಪುನೀತ್​ 2014ರ ಅಕ್ಟೋಬರ್​ನಲ್ಲಿ 40 ಸಾವಿರ ರೂ.ಗಳಿಗೆ ಖರೀದಿ ಮಾಡಿದ್ದ. ಆದರೆ, ಹಣ ನೀಡದೆ ಸತಾಯಿಸುತ್ತಿದ್ದ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ. 2014ರ ನವೆಂಬರ್​ 3 ರಂದು ಆರೋಪಿಗಳು ರಂಜಿತ್​ನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದರು. ಆದರೆ, ಮೂರು ದಿನವಾದರೂ ವಾಪಸ್​ ಬಾರದೆ ಇರುವುದರಿಂದ ಮೃತನ ತಾಯಿ ಶೋಭಾ ಹಾರೋಹಳ್ಳಿ ಠಾಣೆಗೆ ದೂರು ನೀಡಿದ್ದರು.

ರಂಜಿತ್​ ಮಾವ ದಾಸಪ್ಪ ದೊಡ್ಡೂರ ಅರಣ್ಯ ಪ್ರದೇಶದಲ್ಲಿ ಹುಡುಕುತ್ತಿರುವಾಗ ರಂಜಿತ್​ನ ಶವಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಂದಿನ ಸರ್ಕಲ್​ ಇನ್​ಸ್ಪೆಕ್ಟರ್​ ಸತೀಶ್​, ಎಸ್​.ಐ. ರವಿಕುಮಾರ್​ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಪುನೀತ್​, ನಾಗರಾಜ್​ ನಾಯ್ಕ ಹಾಗೂ ವಿವೇಕ್​, ರಂಜಿತ್​ಗೆ ಮದ್ಯಪಾನ ಮಾಡಿಸಿ ಮನಬಂದಂತೆ ಹಲ್ಲೆ ಮಾಡಿ ಬಿಳಿಕಲ್ಲು ಅರಣ್ಯ ಪ್ರದೇಶದ ದೊಡ್ಡೂರು ಕಾಡಿನಲ್ಲಿ ಶವ ಎಸೆದು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್​ ಶೀಟ್​ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್​.ಎನ್​.ಕುಮಾರ್​ ಅವರು ಜೀವಾವಧಿ ಶಿೆ ಹಾಗೂ ದಂಡ ವಿಧಿಸಿ 50 ಸಾವಿರ ರೂ.ಗಳನ್ನು ಮೃತನ ತಾಯಿಗೆ ಪರಿಹಾರ ನೀಡಲು ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಎಂ.ಕೆ. ರೂಪಲಕ್ಷಿ$್ಮ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net