ಜೀವನದ ಪಾಠ ತರಗತಿಯಲ್ಲಿ ಸಿಗಲ್ಲ

hbr (1)
Published on

ಹೆಬ್ರಿ: ಸಾಧನೆಗೆ ಪ್ರಯತ್ನ ಮತ್ತು ಅದೃಷ್ಟ ಇವೆರಡು ಮುಖ್ಯ ಸಂಗತಿಗಳು. ಪರಿಶ್ರಮ ಮೆಟ್ಟಿಲು ಇದ್ದಂತೆ, ಅದೃಷ್ಟ ಲಿಫ್ಟ್ ಇದ್ದಂತೆ. ಲಿಫ್ಟ್ ಕೈ ಕೊಡಬಹುದು ಆದರೆ ಪ್ರಯತ್ನ ಯಾವತ್ತೂ ಕೈ ಕೊಡುವುದಿಲ್ಲ. ಜೀವನದ ಕಷ್ಟ ಕಲಿಸಿದ ಪಾಠ ತರಗತಿಯಲ್ಲಿ ಸಿಗುವುದಿಲ್ಲ. ಅದನ್ನು ನಾವು ಜೀವನಾನುಭವದಿಂದಲೇ ಪಡೆದುಕೊಳ್ಳಬೇಕು. ಆದ್ದರಿಂದ ಗುರು ಹಿರಿಯರು ತಂದೆ ತಾಯಿಗಳು ಹೇಳಿದ ವಾತುಗಳನ್ನು ಯಾವಾಗಲೂ ನಿಷ್ಠೆಯಿಂದ ಕೇಳಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಹೇಳಿದರು.

ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವಸ್ಥರಾದ ವಿಷ್ಣುಮೂರ್ತಿ ನಾಯಕ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ಪ್ರಾಂಶುಪಾಲ ಪ್ರಕಾಶ್ ಜೋಗಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುವಾರ್ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ವೀಣೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net