ಮಳೆ ಬಿರುಸು ಕೃಷಿ ಕಾರ್ಯ ಚುರುಕು

byn
Published on

ವಿಜಯವಾಣಿ ಸುದ್ದಿಜಾಲ ಬೈಂದೂರು ಹವಾವಾನ ವ್ಯಪರೀತ್ಯ, ಚಂಡವಾರುತ ಪ್ರಭಾವದಿಂದಾಗಿ ಕರಾವಳಿ ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು ಇದೀಗ ಮುಂಗಾರು ಕೂಡ ಪ್ರವೇಶವಾಗಿದೆ. ರೈತರು ಕೃಷಿ ಕಾರ್ಯ ಆರಂಭಿಸಿದ್ದು ಗದ್ದೆಗಳನ್ನು ಹದಗೊಳಿಸಿವ ಕಾಯಕದಲ್ಲಿ ನಿರತರಾಗಿದ್ದಾರೆ. ಈ ಬಾರಿ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ 3700 ಹೆಕ್ಟೇರ್ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಬಿತ್ತನೆ ಬೀಜ ಪೂರೈಕೆ: ಕಳೆದ ವರ್ಷ ಬೈಂದೂರು ತಾಲೂಕಿನಲ್ಲಿ ಬಿತ್ತನೆ ಬೀಜ ಅಭಾವದಿಂದ ಮುಂಗಾರು ಆರಂಭದಲ್ಲಿ ಭತ್ತ ಬೆಳೆಗಾರರು ಸಮಸ್ಯೆ ಅನುಭವಿಸಿದ್ದರು. ಈ ವರ್ಷ ಸಮಯಕ್ಕೆ ಸರಿಯಾಗಿ ಭತ್ತದ ಬೀಜ ಪೂರೈಕೆಯಾಗಿದ್ದು, 497 ರೈತರಿಗೆ 177 ಕ್ವಿಂಟಾಲ್ ಬಿತ್ತನೆ ಬೀಜ ಪೂರೈಕೆಯಾಗಿದೆ. ಇನ್ನುಳಿದಂತೆ ಕೃಷಿಕರಿಗೆ ಪಹಣಿ ಆಧಾರದಲ್ಲಿ ಸ್ಪಿಂಕ್ಲರ್, ಪಿವಿಸಿ ಪೈಪ್, ಟಿಲ್ಲರ್, ನಾಟಿಯಂತ್ರ, ಟಾರ್ಪಾಲಿನ್‌ಲಭ್ಯವಿದೆ. ಕಳೆದ ವರ್ಷ ಮಳೆ ಪ್ರಭಾವದಿಂದ 104.4 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 283 ರೈತರು ಸರ್ಕಾರದಿಂದ ಪರಿಹಾರ ಪಡೆದಿದ್ದಾರೆ. ಬೈಂದೂರು ತಾಲೂಕಿನಲ್ಲಿ ಒಟ್ಟು 7,761 ರೈತರು ಪಿಎಂ ಕಿಸಾನ್ ಯೋಜನೆ ನೋಂದಾಯಿಸಿದ್ದಾರೆ. ಅದರಲ್ಲಿ 7,400 ರೈತರಿಗೆ ಕೇಂದ್ರ ಸರ್ಕಾರದ ಆರ್ಥಿಕ ಸಹಾಯ ದೊರೆತಿದೆ. ಯಡ್ತರೆ, ಬೈಂದೂರು, ನಾಡ, ಹೇರಂಜಾಲು ಸೇರಿದಂತೆ ಒಟ್ಟು 300 ಜನ ರೈತರ ದಾಖಲೆ ಸಮರ್ಪಕವಾಗಿಲ್ಲದ ಕಾರಣ ಬಾಕಿಯುಳಿದಿದೆ. ಈ ಪೈಕಿ ಕೆಲವು ರೈತರು ಮೃತಪಟ್ಟಿದ್ದಾರೆ. ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಪಿಎಂ ಕಿಸಾನ್ ಯೋಜನೆಗೆ ಆಯ್ಕೆಯಾಗಿ ಹಣ ದೊರೆಯದಿದ್ದರೆ ಕೃಷಿ ಇಲಾಖೆ ಸಂಪರ್ಕಿಸಬಹುದು ಎಂದು ಇಲಾಖೆ ತಿಳಿಸಿದೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಪ್ರೂಟ್ಸ್ ನೋಂದಣಿಯಲ್ಲಿ ಒಟ್ಟು 147049 ರೈತರ ಹೆಸರು ಇದ್ದು, ಈ ಪೈಕಿ 39752 ಮಂದಿ ರೈತರ ನೋಂದಣಿ ಬಾಕಿಯಿದೆ. ರಾಜ್ಯ ಸರ್ಕಾರದ ಪ್ರತಿ ಯೋಜನೆಗೆ ಫ್ರೂಟ್ಸ್ ನೋಂದಣಿ ಕಡ್ಡಾಯವಾಗಿರುವ ಕಾರಣ ಬಾಕಿ ಉಳಿದಿರುವ ಬೈಂದೂರು ತಾಲೂಕು ರೈತರು ನೋಂದಣಿ ವಾಡಿಕೊಳ್ಳುವಂತೆ ಬೈಂದೂರು ಕೃಷಿ ಇಲಾಖೆ ತಿಳಿಸಿದೆ. ಕಾಡು ಪ್ರಾಣಿಗಳ ಹಾವಳಿ, ಕೂಲಿ ಕಾರ್ಮಿಕರ ಸಮಸ್ಯೆ, ಹವಾವಾನ ವೈಪರೀತ್ಯಗಳಿಂದ ರೈತರು ಕೃಷಿ ಕಾರ್ಯದಿಂದ ವಿಮುಖರಾಗುತ್ತಿದ್ದಾರೆ. ಕೃಷಿಕರು ಕೃಷಿಯತ್ತ ಒಲವು ತೋರಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ರೈತರು ಅವುಗಳನ್ನು ಸದುಪಯೋಗ ಮಾಡಬೇಕು.

ರಾಜ್ಯ ಸರ್ಕಾರದ ಸುತ್ತೋಲೆಯಂತೆ ಕೃಷಿ ಇಲಾಖೆಯಿಂದ ಅನೇಕ ಸವಲತ್ತುಗಳನ್ನು ರೈತರಿಗೆ ಸಮರ್ಪಕವಾಗಿ ಪೂರೈಸಲಾಗುತ್ತಿದೆ. ಭತ್ತದ ಕೃಷಿಗೆ ಬೇಡಿಕೆ ಇರುವ ಎಂ.4 ಬೀಜ ಲಭ್ಯವಿದೆ. ಕೆಂಪುಮುಕ್ತಿ, ಪಂಚಮಿ, ಬ್ರಹ್ಮ ತಳಿಗಳ ಬಗ್ಗೆ ತಿಳಿಸಲಾಗಿದೆ. ಕೃಷಿ ಕುರಿತಂತೆ ಬೈಂದೂರು ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು. ಗಾಯತ್ರಿದೇವಿ, ಸಹಾಯಕ ಕೃಷಿ ಅಧಿಕಾರಿ, ಬೈಂದೂರು https://www.vijayavani.net/green-life-campaign-in-kodi-kanyana https://www.vijayavani.net/sugunendra-tirtha-sripada-kambani-for-ahmedabad-plane-crash

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net