ಸಮಾಜ ಸೇವೆಯಿಂದ ಜೀವನ ಸಾರ್ಥಕ

ಸಮಾಜ ಸೇವೆಯಿಂದ ಜೀವನ ಸಾರ್ಥಕ
Published on

ಸೋಮವಾರಪೇಟೆ: ಸಮಾಜಸೇವೆಯಲ್ಲಿ ರೋಟರಿ ಮಾದರಿಯಾಗಿದ್ದು, ನಿಸ್ವಾರ್ಥ ಸಮಾಜ ಸೇವೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ವಿಕ್ರಮ್‌ದತ್ತ ಹೇಳಿದರು.

ಸೋಮವಾರಪೇಟೆ ರೋಟರಿ ಹಾಲ್‌ನಲ್ಲಿ ನಡೆದ ರೋಟರಿ ಸದಸ್ಯರ ಸಭೆಯಲ್ಲಿ ಸ್ಥಳೀಯ ರೋಟರಿ ಹಿಲ್ಸ್‌ನ ವಾರ್ಷಿಕ ಕಾರ್ಯಕ್ರಮಗಳನ್ನು ಆಲಿಸಿ ಮಾತನಾಡಿದರು.

ಸೋಮವಾರಪೇಟೆ ಹಳೆಯ ಕ್ಲಬ್ ಆಗಿದ್ದು, ಅನೇಕ ಜನಪರ ಕಾರ್ಯಗಳನ್ನು ಮಾಡುತ್ತ ಇತರ ಕ್ಲಬ್‌ಗಳಿಗೆ ಮಾದರಿಯಾಗಿದೆ. ಆಕರ್ಷಕ ರೋಟರಿ ಭವನವನ್ನು ನಿರ್ಮಿಸಿದೆ. ರೋಟರಿ ಮಾಜಿ ಅಧ್ಯಕ್ಷರುಗಳು ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪಭಾಗವನ್ನು ಇಲ್ಲದವರಿಗೆ ಕೊಡಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಅನೇಕರು ರೋಟರಿ ಫೌಂಡೇಷನ್‌ಗೆ ಪ್ರತಿವರ್ಷ ದೇಣಿಗೆ ನೀಡುತ್ತಿರುವುದು ಸಂತೋಷದ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ರೋಟರಿ ಹಿಲ್ಸ್ ಅಧ್ಯಕ್ಷ ಜೆ.ಕೆ.ಪೊನ್ನಪ್ಪ ಮಾತನಾಡಿ, ರೋಟರಿ ಸದಸ್ಯರ ಸಹಕಾರದಿಂದ ಅನೇಕ ಜನಪರ ಯೋಜನೆಗಳನ್ನು ಮಾಡಿದ್ದೇವೆ. ರೋಟರಿಯಲ್ಲಿ ಕೆಲಸ ಮಾಡುವುದೇ ನಮಗೆ ಹೆಮ್ಮೆಯ ವಿಷಯವಾಗಿದ್ದು, ಸಮಾಜಸೇವೆ ಮಾಡುವುದು ರೋಟರಿ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಹಾಯಕ ಪ್ರಾಂತಪಾಲ ಡಾ.ಹರಿ.ಎ.ಶೆಟ್ಟಿ, ವಲಯ ಸೇನಾನಿ ಎಂ.ಎಂ.ಪ್ರಕಾಶ್ ಕುಮಾರ್, ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ನಿಯೋಜಿತ ಅಧ್ಯಕ್ಷ ವೀಣಾ ಮನೋಹರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net