

ಕುಂದಾಪುರ: ಹಳ್ಳಿಯ ಶ್ರಮದ ಬದುಕು ಜಾನಪದ ಸಾಹಿತ್ಯದ ಮೂಲ. ಜೀವನಾನುಭವದ ವಿಶ್ವವಿದ್ಯಾನಿಲಯ. ಇಲ್ಲಿ ಬದುಕಿನ ಮೂಲ ಶಿಕ್ಷಣದ ಪಾಠವನ್ನು ಒಳಗೊಂಡ, ಅರಿವನ್ನು ವಿಸ್ತರಿಸುವ ಜೀವನಾನುಭವದ ಅಮೃತವಿದೆ. ನೋವು ನಲಿವುಗಳನ್ನು ಒಳಗೊಂಡಿರುವ ಜನಪದ ನಮ್ಮೆಲ್ಲರ ಬದುಕಿಗೆ ಹತ್ತಿರವಾದ ಶ್ರೀಮಂತ ಸಮೃದ್ಧ ಸಾಹಿತ್ಯ. ಈ ಜನಪದ ಸಾಹಿತ್ಯವನ್ನು ಜತನದಿಂದ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಜಾನಪದ ಪರಿಷತ್ ಉಡುಪಿ ಟಕ ಅಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ ಹೇಳಿದರು.
ಕನ್ನಡ ಜಾನಪದ ಪರಿಷತ್ ಉಡುಪಿ ಮತ್ತು ಕುಂದಾಪುರ ಟಕ ವತಿಯಿಂದ ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮ ಅಂಗವಾಗಿ ಕಂಡ್ಲೂರಿನ ರಾಮ್‌ಸನ್ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಕುಂದಾಪುರ ಕನ್ನಡದ ಗಾದೆ ಮತ್ತು ಒಗಟುಗಳ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುವಾನ ವಿತರಿಸಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್‌ಕುವಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಸಾವ್ರಾಟ್ ಶೆಟ್ಟಿ ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಜಾನಪದ ಪರಿಷತ್ ಕುಂದಾಪುರ ಟಕ ಪ್ರಧಾನ ಕಾರ್ಯದರ್ಶಿ ರಾವೇಂದ್ರ ಪ್ರಭು ಕರ್ವಾಲ್, ಸದಸ್ಯ ಶ್ರೀಧರ ಪುರಾಣಿಕ್, ಮುಖ್ಯಶಿಕ್ಷಕ ಗೋಪಾಲ್ ವಿಷ್ಣು ಭಟ್ ಮಾತನಾಡಿದರು.
ಶಿಕ್ಷಕರಾದ ನಿತ್ಯಾನಂದ ಶೆಟ್ಟಿ ಹಳನಾಡು, ಅಜಯ್‌ಕುವಾರ್ ಶೆಟ್ಟಿ, ಅಣ್ಣಪ್ಪ ಎಂ.ಗೌಡ, ರಜನಿ ಹೆಗಡೆ, ರತ್ನಾ, ಲಕ್ಷ್ಮೀ ಶೆಟ್ಟಿ, ಅಶ್ವಿನಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಜ್ಯೋತಿ ಸ್ವಾಗತಿಸಿದರು. ಜಾನಪದ ಪರಿಷತ್ ಕುಂದಾಪುರ ಟಕ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕ ಸಂತೋಷ್ ನಿರೂಪಿಸಿ, ವಂದಿಸಿದರು.