

ಬೆಂಗಳೂರು: ಕೃತಕ ಬುದ್ಧಿಮತ್ತೆಯನ್ನು (ಎಐ) ಸಮರ್ಪಕವಾಗಿ ಬಳಸಿದರೆ ಗ್ರಂಥಾಲಯಗಳು ಸಮಾಜದಲ್ಲಿ ಜ್ಞಾನ, ಆವಿಷ್ಕಾರ ಮತ್ತು ಸಮಾನತೆಯ ಕಂಬಗಳಾಗಿ ಮುಂದುವರೆಯಲಿವೆ ಎಂದು ವಿಶ್ರಾಂತ ಕುಲಪತಿ ಡಾ. ಕೆ.ಆರ್. ವೇಣುಗೋಪಾಲ ಆಶಯ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಸೋಮವಾರ ಆಯೋಜಿಸಿದ್ದ ’ಡಿಜಿಟಲ್ ಲ್ಯಾಂಡ್‌ಸ್ಕೇಪ್ ಇನ್ ಲ್ರೈಬ್ರರಿ (ಈಔಔ 4.0)’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಎಐ ಬೃಹತ್ ಕ್ರಾಂತಿ ತಂದಿದೆ. ಜ್ಞಾನ ಪಡೆದುಕೊಳ್ಳುವ ಮಾರ್ಗಗಳನ್ನು ಬದಲಿಸಿದೆ. ಚಾಟ್‌ಜಿಪಿಟಿ ಬೆರಳತುದಿಯಲ್ಲೇ ಎಲ್ಲದಕ್ಕೂ ಉತ್ತರಿಸುತ್ತದೆ. ಇಂದು ಎಐ ವಿಶ್ವದ ಎಲ್ಲ ಭಾಷೆಗಳನ್ನು ಒಳಗೊಂಡಂತೆ 70 ಸಾವಿರಕ್ಕಿಂತ ಹೆಚ್ಚು ಪದಗಳನ್ನು ಹೊಂದಿದೆ. ಯಾವುದೇ ಪ್ರಶ್ನೆಗೆ ಕ್ಷಣಮಾತ್ರದಲ್ಲೇ ನಿಖರವಾದ ಉತ್ತರಗಳನ್ನು ನೀಡುತ್ತದೆ ಎಂದರು.
ಪುರಾತನ ಲಿಪಿಗಳು, ಗ್ರಂಥಗಳು, ಪುಸ್ತಕಗಳು ಮತ್ತು ಮಾಹಿತಿಗಳನ್ನು ಎಐ ಚಾಲಿನ ಸಾಧನಗಳನ್ನು ಬಳಸಿ ಪುನರ್‌ಸ್ಥಾಪಿಸಲಾಗುತ್ತಿದೆ. ಈ ಮೂಲಕ ಕಳೆದುಹೋಗುವ ಜ್ಞಾನವನ್ನು ಡಿಜಿಟಲ್ ರೂಪದಲ್ಲಿ ಭವಿಷ್ಯದ ಪೀಳಿಗೆಗೆ ನೀಡಬಹುದಾಗಿದೆ. ಸಾಂಪ್ರದಾಯಿಕ ಗ್ರಂಥಾಲಯಗಳನ್ನು ಹೊರತುಪಡಿಸಿ ಸ್ಮಾರ್ಟ್ ಗ್ರಂಥಾಲಯಗಳು ಹೆಚ್ಚಾಗುತ್ತಿದೆ. ಪುಸ್ತಕಗಳ ನಿರ್ವಹಣೆ, ಟ್ರ್ಯಾಕಿಂಗ್ ಮತ್ತು ಬಯೋಮೆಟ್ರಿಕ್ ವ್ಯವಸ್ಥೆಗಳಲ್ಲಿ ಎಐ ಪಾತ್ರ ದೊಡ್ಡದಿದೆ ಎಂದು ಹೇಳಿದರು.
ಬೆಂ.ವಿ.ವಿ.ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಎಂ. ರಘುನಂದನ ಮಾತನಾಡಿ, ಬೆಂ.ವಿವಿ ಗ್ರಂಥಾಲಯವು ಸುವರ್ಣ ಮಹೋತ್ಸವ ಆಚರಿಸುತ್ತದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿನ ಭವಿಷ್ಯಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ಸಮ್ಮೇಳನದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿನ ಅವಕಾಶಗಳು, ಡಿಜಿಟಲ್ ಸ್ವರೂಪ, ಬದಲಾವಣೆಗಳು, ತಂತ್ರಜ್ಞಾನ ಮತ್ತು ಆವಿಷ್ಕಾರಗಳು, ಸವಾಲು ಮತ್ತು ಪರಿಹಾರಗಳ ಕುರಿತು ಉಪನ್ಯಾಸ, ಚರ್ಚೆ, ಸಂವಾದಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಗ್ರಂಥಾಲಯ ಕ್ಷೇತ್ರದಲ್ಲಿನ ಕೊಡುಗೆ ಮತ್ತು ಸಾಧನೆಯನ್ನು ಪರಿಗಣಿಸಿ ಪ್ರೊ. ಎಂ. ರಘುನಂದನ ಅವರಿಗೆ ಸೊಸೈಟಿ ಫಾರ್ ಲ್ರೈಬ್ರರಿ ಪ್ರೊೆಷನಲ್ಸ್ ವತಿಯಿಂದ ‘ರಿಸರ್ಚ್ ಎಕ್ಸಲೆನ್ಸಿ ಅವಾರ್ಡ್ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಂ.ವಿವಿ ಕುಲಪತಿ ಡಾ. ಎಸ್.ಎಂ. ಜಯಕರ, ಕುಲಸಚಿವ ಶೇಕ್ ಲತ್ೀ, ದಾವಣಗೆರೆ ವಿವಿ ಕುಲಪತಿ ಬಿ.ಡಿ. ಕುಂಬಾರ್, ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.