ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ

18TLR1
Published on

ತಲ್ಲೂರ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಹೊಸ ಚಿಂತನೆ, ವಿಚಾರ ಹಾಗೂ ಕಲಿಕೆ ರೂಢಿಸಿಕೊಳ್ಳಬೇಕು ಎಂದು ಶಿಕ ಎಲ್​.ಎಸ್​.ನಾಗನ್ನವರ ಹೇಳಿದರು.

ಗ್ರಾಮದ ಶ್ರೀಬಸವೇಶ್ವರ ಯುವಕ ಮಂಡಳ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮಾತನಾಡಿದರು.

ಮುಖಂಡ ಕೀರಪ್ಪ ಬಡಿಗೇರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಗುಣಮಟ್ಟದ ಶಿಣದ ಜತೆಗೆ ಸಂಸತಿ, ಸಂಸ್ಕಾರ ಅಳವಡಿಸಿಕೊಂಡು ಗುರು&ಹಿರಿಯರು, ಹೆತ್ತವರು ಹಾಗೂ ಶಿಕರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.

ಸಮಾಜ ಸೇವಕ ಮಹಾಂತೇಶ ಮರಿಗೌಡ್ರ ಶಾಲೆಗೆ ಲೋಟ, ತಟ್ಟೆ ನೀಡಿದರು. ಸಾಯಿ ಪಿಕೆಪಿಎಸ್​ ಅಧ್ಯ ಮಹಾರುದ್ರಪ್ಪ ಉಪ್ಪಿನ, ನಿವೃತ್ತ ಮುಖ್ಯಶಿಕ ಎಸ್​.ಆರ್​.ಬೆನಕಟ್ಟಿ, ಮಲ್ಲಿಕಾರ್ಜುನ ಗಾಣಿಗೇರ, ಬಸಪ್ರಭು ಮಲಕನ್ನವರ, ಲತಾ ತಲ್ಲೂರ, ಬಿ.ಸಿ.ಕರಿಕಟ್ಟಿ, ಆರ್​.ಪಿ.ದುಂಡನಕೊಪ್ಪ, ಈರಪ್ಪ ಚಿಕಾಕಿ, ಎಸ್​.ಎಪ್​.ಬಡಿಗೇರ, ಮಹಾಂತೇಶ ಮರಿಗೌಡರ, ಎ.ಜೆ.ಕಾಂಬಳೆ, ಜಿ.ಎ.ಕೊಟ್ರಶೆಟ್ಟಿ, ಎಸ್​.ಎಂ.ಸಾಲಿ, ಎ.ಎಚ್​.ಕುದರಿ, ಎನ್​.ಎ.ಕತ್ತಿ, ರೆಹಮಾನಸಾಬ್​ ಮುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net