ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ

6Kolavi1
Published on

ಕೊಳವಿ: ಪ್ರಸ್ತುತ ದಿನಗಳಲ್ಲಿ ಮಕ್ಕಳು ಮೊಬೈಲ್​ ಗೀಳಿಗೆ ಅಂಟಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಅತಿಯಾದ ಮೊಬೈಲ್​ ಬಳಕೆ ಆರೋಗ್ಯಕ್ಕೆ ಹಾನಿಕರವಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚಿನ ಸಮಯ ಮೀಸಲಿಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮಂಜುನಾಥ ಸ್ವಾಮೀಜಿ ಹೇಳಿದರು.

ಸಮೀಪದ ಮಮದಾಪುರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪುಣ್ಯದ ನಾಡು ಮಮದಾಪುರ ಗ್ರಾಮದಲ್ಲಿ ಶಿಣ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಕಲಿತ ಶಾಲೆ, ಶಿಕರು ಹಾಗೂ ಹೆತ್ತವರಿಗೆ ಕೀರ್ತಿ ತರಬೇಕು. ಜತೆಗೆ ಸಾಧನೆಗಳಿಂದ ಗ್ರಾಮ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಶ್ರಮವಹಿಸಬೇಕು ಎಂದರು.

ಗ್ರಾಪಂ ಸದಸ್ಯ ಸುರೇಶ ಸನದಿ ಮಾತನಾಡಿ, ಗ್ರಾಪಂ ವತಿಯಿಂದ ಶಾಲೆಯ ಅಭಿವೃದ್ಧಿಗೆ ಸಹಕರಿಸುವ ಜತೆಗೆ ಅಗತ್ಯ ಮೂಲಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು.

ಮುಖ್ಯಶಿಕ ರವೀಂದ್ರ ದೇಮಶೆಟ್ಟಿ ಮಾತನಾಡಿ, ಶಾಲೆಯ ಹಳೆ ವಿದ್ಯಾರ್ಥಿ ಮೌನ ಯೋಗಿ ಮಲ್ಲಿಕಾರ್ಜುನ ಸ್ವಾಮೀಜಿ ಶಾಲೆ ಅಭಿವೃದ್ಧಿಗೆ 1 ಲ ರೂ. ದೇಣಿಗೆ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಜಯವಾಣಿ ವಿದ್ಯಾರ್ಥಿಮಿತ್ರ ಕೊಡಮಾಡಿದ ಅಶೋಕ ಗೋಪಾಳಿ, ಸಿದ್ದಪ್ಪ ಕಳ್ಯಾಗೋಳ ಕೊಡುಗೆ ಶ್ಲಾಘಿಸಿದರು.

ಸ್ಥಳಿಯ ಮೌನಯೋಗಿ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಂಪಂ ಸದಸ್ಯ ಕೆಂಪಣ್ಣ ಮೈಲಣ್ಣವರ, ಗ್ರಾಮೀಣ ವಿದ್ಯಾವರ್ಧಕ ಸಂದ ಅಧ್ಯ ಎಂ.ಆರ್​.ಕಮತ, ಪಿಡಿಒ ವಿನಾಯಕ ಮಾಳಿ, ಈರಣ್ಣ ಜನ್ಮಟ್ಟಿ, ಎಸ್​.ಎಸ್​.ದಂಡಾಪುರ, ಸಂಜು ಮುರಗೋಡ, ಬಿ.ಎಂ.ಗಾಣಗಿ, ಎಸ್​.ಬಿ.ನಾಗನೂರ,

ಎಸ್​.ಜಿ.ಕಮತ, ಎಸ್​.ಬಿ.ಸೊಂಡೂರ, ಶಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿ.ಎನ್​.ಹುಣಸಿಗಿಡದ ಸ್ವಾಗತಿಸಿದರು. ಎ.ಎಂ.ಕಮತ ವಂದಿಸಿದರು. ಆರ್​.ಎಂ.ಕಮತ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net