ಸಂಶೋಧನೆ ಮಾಡಿದವರನ್ನು ಸ್ಮರಿಸೋಣ

20mul1- photography
Published on

ಮುಳಗುಂದ: ಫೋಟೋಗ್ರಫಿ ಒಂದು ಕಲೆ, ಛಾಯಾಗ್ರಹಣ ಈ ಮಟ್ಟಕ್ಕೆ ಬೆಳೆದು ಬರಬೇಕಾದರೆ ಎಷ್ಟೋ ಹಿರಿಯ ಜೀವಿಗಳು ಸಂಶೋಧನೆ ಮಾಡಿ ಅದನ್ನು ಸರಳೀಕರಿಸಿದ್ದಾರೆ. ಅಂತಹ ಹಿರಿಯ ಜೀವಿಗಳನ್ನು ಸ್ಮರಿಸಬೇಕಾಗಿದೆ ಎಂದು ಡಾ. ಎಸ್.ಸಿ. ಚವಡಿ ಹೇಳಿದರು.


ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಮಠದಲ್ಲಿ ಶನಿವಾರ ಸ್ಥಳೀಯ ಛಾಯಾಗ್ರಾಹಕರ ಸಂಘದಿಂದ ಹಮ್ಮಿಕೊಂಡಿದ್ದ 184ನೇ ವಿಶ್ವ ಛಾಯಾಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಎಲ್ಲರಿಗೂ ಫೋಟೋಗ್ರಫಿ ಕಲೆ ಬರುವುದಿಲ್ಲ. ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಫೋಟೋಗ್ರಫಿಗೆ ಬಹಳ ಮಹತ್ವವಿದೆ. ಹವ್ಯಾಸದಲ್ಲಿ ರೂಢಿಯಿದ್ದ ಫೋಟೋಗ್ರಫಿ ಇಂದು ಒಂದು ದೊಡ್ಡ ಉದ್ಯಮವಾಗಿದೆ ಎಂದರು.


ಹಿರಿಯ ಛಾಯಾಗ್ರಾಹಕರಾದ ಎಂ.ಬಿ. ಬಿನ್ನಾಳ, ಐ.ಎಸ್. ಜಾಧವ ಹಾಗೂ ಬಿ.ಎಲ್. ಜಾಧವ ಅವರನ್ನು ಸನ್ಮಾನಿಸಲಾಯಿತು.


ಪಪಂ ಮಾಜಿ ಸದಸ್ಯ ಮಹಾಂತೇಶ ಕಣವಿ, ಮಂಜುನಾಥ ಹೊಸಮನಿ, ಸಂಘದ ಅಧ್ಯಕ್ಷ ಚಿಕ್ಕಪ್ಪ ದೇವರಮನಿ, ಸದಸ್ಯರಾದ ಚಂದ್ರು ಭಜಂತ್ರಿ, ವಿನಾಯಕ ಜಾಧವ, ಮಂಜುನಾಥ ಬಟ್ಟೂರ, ಬಸವರಾಜ ಹಂಚಿನಾಳ, ಇಮ್ತಿಯಾಜ್ ಖಲೀಫನವರ, ಗೌಸ್ ಮೋದಿನ್​ಸಾಬ ಖಲೀಫನವರ, ಶ್ರೀಕಾಂತ ಕುರುವತ್ತಿ, ಭೀಮನಗೌಡ ಪಾಟೀಲ, ರಫೀಕ್ ಹವಾಲ್ದಾರ, ಮಹದೇವಪ್ಪ ದೇವರೆಡ್ಡಿ, ವಸಂತ ಕಮ್ಮಾರ, ಕಾರ್ತಿಕ ನಂದಿಕೋಲಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net